ಸಮಂತಾ ರವರ ಮನವೊಲಿಸುವಲ್ಲಿ ಯಶಸ್ವಿಯಾದ ಸದ್ಗುರು: ಗುರೂಜಿ ರವರ ಮಾತು ಕೇಳಿ ಮಹತ್ವದ ನಿರ್ಧಾರ ತೆಗೆದುಕೊಂಡ ಸಮಂತಾ. ಏನು ಗೊತ್ತೇ??

19

ನಮಸ್ಕಾರ ಸ್ನೇಹಿತರೇ ಕಳೆಯ ಅಕ್ಟೋಬರ್ ತಿಂಗಳಿನಲ್ಲಿ ನಾಗಚೈತನ್ಯ ಅವರಿಗೆ ಸಮಂತಾ ಅವರು ವಿವಾಹ ವಿಚ್ಛೇದನವನ್ನು ನೀಡಿರುವುದು ಹಾಗೂ ಅದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವುದು ನಿಮಗೆಲ್ಲ ಗೊತ್ತಿದೆ. ಇಂದಿಗೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅದರ ಕುರಿತಂತೆ ಚರ್ಚೆಗಳು ನಿಂತಿಲ್ಲ. ವಿವಾಹ ವಿಚ್ಛೇದನದ ನಂತರ ಸಮಂತ ಅವರು ಒಬ್ಬಂಟಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಪುಷ್ಪಾ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಂಡು ನಂತರ ಸಮಂತ ಅವರಿಗೆ ಹಲವಾರು ಸಿನಿಮಾಗಳ ಆಫರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ವಿಭಿನ್ನ ಬಗೆಯ ಪಾತ್ರಗಳು ವಿಭಿನ್ನ ಭಾಷೆಗಳ ಚಿತ್ರರಂಗದಿಂದ ಸಮಂತ ಅವರನ್ನು ಹುಡುಕಿಕೊಂಡು ಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಂತ ಅಮೆರಿಕಗಾಗಿ ಚಿಕಿತ್ಸೆಗೆ ತೆರಳುತ್ತಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಅದಕ್ಕೂ ವಿಶೇಷ ಎನ್ನುವಂತೆ ಹಲವಾರು ದಿನಗಳಿಂದ ಸಮಂತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿಲ್ಲ. ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಿಂದ ಅವರು ದೂರವಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಸದ್ಗುರು ಅವರ ಮಾರ್ಗದರ್ಶನದ ಮೇರೆಗೆ ಸಮಂತಾ ಮಾಡಲು ಹೋಗುತ್ತಿರುವ ಕೆಲಸದ ಬಗ್ಗೆ ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಯಾಗಿದೆ.

ಹೌದು ವಿವಾಹ ವಿಚ್ಛೇದನ ಪಡೆದಿದ್ದ ಸಂದರ್ಭದಲ್ಲಿ ಸದ್ಗುರು ಅವರ ಪ್ರವಚನಗಳಿಂದ ಮಾನಸಿಕ ಸ್ಥಿತಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಸಮಂತ ಅವರಿಗೆ ಸಾಧ್ಯವಾಗಿತ್ತು. ಹೀಗಾಗಿ ಸಮಂತ ಅವರನ್ನು ಎರಡನೇ ಮದುವೆ ಮಾಡಿಕೊಳ್ಳುವುದಕ್ಕೆ ಕೂಡ ಸದ್ಗುರು ಅವರು ಒಪ್ಪಿಸಿ ಹುಡುಗನನ್ನು ಕೂಡ ಈಗಾಗಲೇ ಹುಡುಕಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅತಿ ಶೀಘ್ರದಲ್ಲಿ ಸಮಂತಾ ಮದುವೆಯಾಗಲಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದು ಇದು ಅವರ ಅಭಿಮಾನಿಗಳಿಗೆ ಅಸಮಾಧಾನವನ್ನು ಮೂಡಿಸಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದನ್ನು ಸಮಂತ ಅವರೇ ಹೊರಬಂದು ತಿಳಿಸಬೇಕಾಗಿದೆ.