ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯವಾಗುವಂತೆ ಮತ್ತೊಂದು ಹೆಜ್ಜೆ ಇಟ್ಟ ದ್ರಾವಿಡ್. ಹೊಸ ಮನವಿ ಸಲ್ಲಿಸಿ ಕೇಳಿಕೊಂಡಿದ್ದು ಏನು ಗೊತ್ತೇ??

45

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಇದೆ ಅಕ್ಟೋಬರ್ 16ರಂದು ಪ್ರಾರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಗಾಗಿ ಆಸ್ಟ್ರೇಲಿಯಾ ಗೆ ಅಕ್ಟೋಬರ್ 5ರಂದು ಹೊರಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಬಿಸಿಸಿಐ ಒಳ ಮೂಲಗಳು ತಿಳಿಸಿವೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಟಿ-20 ಸರಣಿ ಆಡುತ್ತಿರುವ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಇನ್ನೂ ಉಳಿದ ಫಾರ್ಮೆಟ್ ನ ಪಂದ್ಯಗಳ ಸರಣಿ ಮುಗಿದ ನಂತರ ಸೌತ್ ಆಫ್ರಿಕಾ ವಿರುದ್ಧವೂ ಕೂಡ ಭಾರತೀಯ ಕ್ರಿಕೆಟ್ ತಂಡ ಭಾರತದಲ್ಲಿ ಮತ್ತೊಂದು ಸರಣಿಯನ್ನು ವಿಶ್ವಕಪ್ ಗೂ ಮುನ್ನ ಆಡಲಿದೆ.

ಇದಾದ ನಂತರ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಗೆ ತೆರಳಲಿದೆ. ಆದರೆ ವಿಶ್ವಕಪ್ ಅನ್ನು ಈ ಬಾರಿ ಗೆಲ್ಲಲೇ ಬೇಕೆಂಬ ಹಟದಲ್ಲಿರುವ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ಮತ್ತೊಂದು ಮನವಿಯನ್ನು ಸಲ್ಲಿಸಿದ್ದಾರೆ. ಅದೇನೆಂದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಸೇರಿಸಬೇಕು ಎನ್ನುವ ಮನವಿಯಾಗಿದೆ.

ಇನ್ನಷ್ಟು ಹೆಚ್ಚಿನ ಪಂದ್ಯಗಳನ್ನು ಆಸ್ಟ್ರೇಲಿಯ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಡುವ ಮೂಲಕ ಅಲ್ಲಿನ ಪಿಚ್ ನಲ್ಲಿ ಹೇಗೆ ಆಡಬೇಕು ಎನ್ನುವ ಪ್ಲಾನಿಂಗ್ ಅನ್ನು ಮಾಡಿಕೊಳ್ಳುವ ಯೋಜನೆ, ರಾಹುಲ್ ದ್ರಾವಿಡ್ ಹಾಗೂ ತಂಡದ್ದು. ಹೀಗಾಗಿ ರಾಹುಲ್ ದ್ರಾವಿಡ್ ಈ ಮನವಿಯನ್ನು ಬಿಸಿಸಿಐ ಮುಂದೆ ಇಟ್ಟಿದ್ದು ಬಿಸಿಸಿಐ ಹಾಗೂ ಇದಕ್ಕೆ ಸಂಬಂಧಪಟ್ಟ ಐಸಿಸಿ ಯಾವ ರೀತಿ ಕ್ರಮವನ್ನು ಕೈ ತೆಗೆದುಕೊಳ್ಳುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಸದ್ಯದ ಮಟ್ಟಿ ಗಂತು ಉಪಯುಕ್ತ ಆಟಗಾರರು ತಂಡದಲ್ಲಿ ಇಲ್ಲದಿರುವ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡ ‌ಹಳಿತಪ್ಪಿದ ರೈಲಿನಂತಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.