ಗಿಚ್ಚಿ ಗಿಲಿಗಿಲಿ ವಿನ್ನರ್ ವಂಶಿಕಗೆ ಸಿಕ್ಕ ಹಣ ಎಷ್ಟು ಲಕ್ಷ ? ವಂಶಿಕ ಈಗ ಏನ್ ಮಾಡ್ತಾ ಇದ್ದಾರೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.

41

ನಮಸ್ಕಾರ ಸ್ನೇಹಿತರೆ ಅಂತೂ ಇಂತೂ ಕೊನೆಗೂ ಕೂಡ ಹಲವಾರು ದಿನಗಳಿಂದ ಕುತೂಹಲ ಮೂಡಿಸಿದ್ದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ವಿಜೇತರ ಘೋಷಣೆಯೊಂದಿಗೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹವಾ ಕ್ರಿಯೇಟ್ ಮಾಡಿದ್ದ ವಂಶಿಕ ಈಗ ಬಿಚ್ಚಿ ಗಿಲಿ ಗಿಲಿ ಕಾರ್ಯಕ್ರಮವನ್ನು ಗೆಲ್ಲುವ ಮೂಲಕ ಅದನ್ನೇ ಮುಂದುವರಿಸಿದ್ದಾಳೆ.

ಕೆಲವರು ವಂಶಿಕ ಗೆಲ್ಲುವುದು ಅನುಮಾನ ಯಾಕೆಂದರೆ ಇದು ದೊಡ್ಡವರು ಕೂಡ ಇರುವ ರಿಯಾಲಿಟಿ ಶೋ ಎಂಬುದಾಗಿ ಭಾವಿಸಿದ್ದರು. ಆದರೆ ಅವೆಲ್ಲವನ್ನು ಮೀರಿ ಶಿವು ಹಾಗೂ ವಂಶಿಕ ಜೋಡಿ ಹೀಗಾಗಿ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ವಿಜೇತರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ ಅದ್ಭುತ ಪರ್ಫಾರ್ಮೆನ್ಸ್ ನೀಡಿದ ಶಿವು ಹಾಗೂ ವಂಶಿಕ ಜೋಡಿ ಮೊದಲ ಪ್ರಶಸ್ತಿ ಆಗಿರುವ 10 ಲಕ್ಷ ರೂಪಾಯಿಗಳ ಅದ್ಧೂರಿ ನಗದು ಬಹುಮಾನವನ್ನು ಗೆದ್ದಿದ್ದಾರೆ. ಇದರ ಜೊತೆಗೆ ವಿನ್ನರ್ ಟ್ರೋಫಿಯನ್ನು ಕೂಡ ಗೆದ್ದಿದ್ದಾರೆ. ರನ್ನರ್ ಅಪ್ ಪ್ರಶಸ್ತಿಯನ್ನು ವಿನೋದ್ ಹಾಗೂ ನಿವೇದಿತ ಗೌಡ ಜೋಡಿ ಗೆದ್ದಿದೆ. ಇವರು ಮೂರು ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದಿದ್ದಾರೆ.

ಸದ್ಯಕ್ಕೆ ಪ್ರೇಕ್ಷಕರು ವಂಶಿಕ ಮುಂದೆ ಯಾವ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಇನ್ನು ಕೆಲವರು ವಂಶಿಕ ಶಾಲೆಗೆ ಹೋಗುತ್ತಿಲ್ಲ ಎಂಬುದಾಗಿ ಅಂದುಕೊಳ್ಳುತ್ತಾರೆ ಆದರೆ ಆಕೆ ಶಾಲೆಗೆ ಹೋಗುವುದರ ಜೊತೆಗೆ ಈ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುತ್ತಿದ್ದಾರೆ ಎಂಬುದು ಎಲ್ಲರೂ ನಂಬಲೇ ಬೇಕಾಗಿರುವ ವಿಚಾರ. ಇನ್ನು ಮಾಸ್ಟರ್ ಆನಂದ್ ಅವರಿಗೆ ತಮ್ಮ ಮಗಳು ವಂಶಿಕ ಡಾಕ್ಟರ್ ಆಗಬೇಕು ಎನ್ನುವ ಆಸೆ ಕೂಡ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಚುರುಕಾಗಿರುವ ಹಾಗೂ ಬುದ್ದಿವಂತಳಾಗಿರುವ ವಂಶಿಕ ಮುಂದಿನ ದಿನಗಳಲ್ಲಿ ಖಂಡಿತವಾಗಿ ದೊಡ್ಡದನ್ನು ಸಾಧಿಸಿ ತೋರಿಸುತ್ತಾಳೆ ಎಂಬುದು ಎಲ್ಲರ ನಂಬಿಕೆ.