ರೋಹಿತ್ ಮಾಡುತ್ತಿರುವ ಎಡವಟ್ಟಿನಿಂದ ದಿನೇಶ್ ರವರ ಆಟಕ್ಕೆ ಬ್ರೇಕ್: ದಿನೇಶ್ ಪರ ನಿಂತ ಗವಾಸ್ಕರ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಿನ್ನೆ ನಡೆದಿರುವ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಮೋಹಲಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡ ನೀಡಿದ್ದ ಬರೋಬ್ಬರಿ 208 ರನ್ನುಗಳ ಗುರಿಯನ್ನು ಚೇಸ್ ಮಾಡಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಮತ್ತೆ ರೋಹಿತ್ ಶರ್ಮ ಅವರ ನಾಯಕತ್ವದ ಮೇಲೆ ಹಲವಾರು ಬೆರಳುಗಳು ಎದ್ದಿವೆ. ಹೌದು ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮ ನಾಯಕತ್ವದ ಭಾರತೀಯ ಪಡೆ ಅತ್ಯಂತ ಬಲಶಾಲಿಯಾಗಿ ಕಂಡಿತ್ತು.
ಆದರೆ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಯಿತು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ರವರ ಬೌಲಿಂಗ್ ಸೇವೆಯನ್ನು ಭಾರತೀಯ ಕ್ರಿಕೆಟ್ ತಂಡ ಪಡೆಯಲೇ ಬೇಕಾಗಿರುವ ಸಂದರ್ಭಕ್ಕೆ ಸಿಲುಕಿದೆ. ಇನ್ನು ದಿನೇಶ್ ಕಾರ್ತಿಕ್ ಅವರ ಪರವಾಗಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್ ತೋರುತ್ತಿರುವ ನಿಲುವು ಮಾಜಿ ಕ್ರಿಕೆಟಿಗ ಆಗಿರುವ ಸುನಿಲ್ ಗವಾಸ್ಕರ್ ಕೆಂಗಣ್ಣಿಗೆ ಗುರಿಯಾಗಿದ್ದು ಇದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹೇಳಿಕೆಯ ಮೂಲಕ ನೀಡಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಫಿನಿಶರ್ ನಿಜ ಆದರೆ ಅವರನ್ನು ಅಕ್ಷರ್ ಪಟೇಲ್ ಅವರಿಗೂ ಮುನ್ನ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸುತ್ತಿರುವುದು ನಿಜಕ್ಕೂ ಕೂಡ ತಪ್ಪು. ಅವರನ್ನು ಕೇವಲ ಕೊನೆಯ ಮೂರರಿಂದ ನಾಲ್ಕು ಓವರ್ ಗಳ ಆಟಗಾರ ಎಂಬುದಾಗಿ ಪ್ರತಿಬಿಂಬಿಸುವುದು ನಿಜಕ್ಕೂ ಕೂಡ ದೊಡ್ಡ ತಪ್ಪು ಎಂಬುದಾಗಿ ಹೇಳಿದ್ದಾರೆ. ಸಿದ್ಧಾಂತಗಳ ಬಲೆಗೆ ಬೀಳಬೇಡಿ ದಿನೇಶ್ ಕಾರ್ತಿಕ್ ಅವರನ್ನು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗಿಗೆ ಇಳಿಸಿ ಎಂಬುದಾಗಿ ಸುನಿಲ್ ಗಾವಸ್ಕರ್ ರೋಹಿತ್ ಶರ್ಮಾ ಅವರಿಗೆ ಕಿವಿ ಮಾತನ್ನು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ತಿಳಿಸಿ.