ಮನೆಯ ಟೆರೇಸ್ ಮೇಲೆ ಮಸ್ತ್ ಡಾನ್ಸ್ ಮಡಿದ ಉಪೇಂದ್ರ ಮಗಳು ಮತ್ತು ಮಗ: ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??

15

ನಮಸ್ಕಾರ ಸ್ನೇಹಿತರೇ, ಇದೇ ಸೆಪ್ಟೆಂಬರ್ 18ರಂದು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಎರಡು ವರ್ಷಗಳಿಂದ ಅಭಿಮಾನಿಗಳ ಜೊತೆಗೆ ತಮ್ಮ ಜನ್ಮ ದಿನಾಚರಣೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಕೊನೆಗೂ ಕೂಡ ಅಭಿಮಾನಿಗಳ ಆಸೆಗೆ ಮಣಿದು ಈ ವರ್ಷ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ಜನ್ಮ ದಿನಾಚರಣೆಯನ್ನು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ರಿಯಲ್ ಸ್ಟಾರ್ ಉಪೇಂದ್ರ ಅವರ ಮೇಲೆ ಪುಷ್ಪದ ಮಳೆಯನ್ನು ಸುರಿಸಿದ್ದಾರೆ. ಇನ್ನು ಜನ್ಮದಿನಾಚರಣೆ ರಿಯಲ್ ಸ್ಟಾರ್ ಉಪೇಂದ್ರ ಅವರದಾಗಿರಬಹುದು ಆದರೆ ಈ ಜನ್ಮದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಮಿಂಚಿದ್ದು ಮಾತ್ರ ಅವರ ಮಕ್ಕಳಾಗಿರುವ ಐಶ್ವರ್ಯ ಹಾಗೂ ಆಯುಷ್.

ತಮ್ಮ ತಂದೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಭಿಮಾನಿಗಳ ಜೊತೆಗೆ ಅತ್ಯಂತ ಫ್ರೆಂಡ್ಲಿ ಹಾಗೂ ಪ್ರೀತಿಯಿಂದ ಇಬ್ಬರೂ ಕೂಡ ನಡೆದುಕೊಂಡಿರುವುದು ಕ್ಯಾಮರಾ ಕಣ್ಣಿಗೆ ಕಂಡು ಬಂದಿದೆ. ಐಶ್ವರ್ಯ ಹಾಗೂ ಆಯುಷ್ ಇಬ್ಬರೂ ಕೂಡ ಟೆರೆಸ್ ಹಾಗೂ ಬಾಲ್ಕನಿಯಲ್ಲಿ ಅಭಿಮಾನಿಗಳ ಕಣ್ಣಿಗೆ ಕಾಣುವಂತೆ ಸಂತೋಷದಿಂದ ಕುಣಿದಿರುವುದು ಕ್ಯಾಮೆರಾ ಕಣ್ಣಿಗೆ ಕಂಡು ಬಂದಿದ್ದು ವಿಡಿಯೋ ಈಗಾಗಲೇ ವೈರಲ್ ಆಗಿದೆ. ಸ್ಟಾರ್ ನಟನ ಮಕ್ಕಳು ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸರಳವಾಗಿ ಅಭಿಮಾನಿಗಳ ಜೊತೆಗೆ ಬೆರೆತಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.