ಸದಾ ತಾಳ್ಮೆ ಇಂದ ಇರುವ ಉಪೇಂದ್ರ ಬಾಡಿ ಗಾರ್ಡ್ ಮೇಲೆ ರೊಚ್ಚಿಗೆದ್ದದು ಯಾಕೆ ಗೊತ್ತೇ?? ಏನಾಗಿತ್ತು ಗೊತ್ತೇ??

15

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಮಹಾನ್ ನಿರ್ದೇಶಕರ ಪಟ್ಟಿಯಲ್ಲಿ ಕಾಣಸಿಗುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಯಾವುದೇ ವಿವಾದಕ್ಕೂ ಕೂಡ ಸಿಲುಕಿದವರಲ್ಲ. ಸಿನಿಮಾ ವಿಚಾರವಾಗಿ ಅವರ ಸಿನಿಮಾಗಳು ಕೆಲವೊಮ್ಮೆ ತಲೆಗೆ ಚಮಕ್ ನೀಡುತ್ತದೆ ಇದು ನಿಜ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ವರ್ಷ ಒಂದು ಸುದ್ದಿಗೆ ಕಾರಣರಾಗಿದ್ದಾರೆ. ಎರಡು ವರ್ಷಗಳಿಂದ ಲಾಕ್ ಡೌನ್ ಕಾರಣದಿಂದಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿಮಾನಿಗಳೊಂದಿಗೆ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಕೊನೆಗೂ ಕೂಡ ಆ ಅವಕಾಶ ಈ ವರ್ಷ ಒದಗಿ ಬಂದಿದ್ದು ಅಭಿಮಾನಿಗಳ ಜೊತೆಗೆ ಸಂತೋಷದಿಂದ ಉಪ್ಪಿ ಬರ್ತಡೇ ಯನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೂರ ದೂರದ ಊರುಗಳಿಂದ ತಮ್ಮ ನೆಚ್ಚಿನ ನಟ ಉಪೇಂದ್ರ ಅವರನ್ನು ನೋಡಿ ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಲು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದರು. ಈ ಸಂದರ್ಭದಲ್ಲಿ ಸೆಕ್ಯೂರಿಟಿ ಗಾರ್ಡ್ ಮೇಲೆ ಉಪಿ ರೊಚ್ಚಿಗೆದ್ದಿದ್ದು ಕಂಡುಬಂದಿತ್ತು. ಅಷ್ಟೊಂದು ಸೌಮ್ಯಾವಾದಿಯಾಗಿರುವ ಉಪೇಂದ್ರ ಅವರು ಯಾಕೆ ಇಲ್ಲಿ ಕೋಪಗೊಂಡರು ಎನ್ನುವುದಕ್ಕೆ ಕೂಡ ಒಂದು ನಿಜವಾದ ಹಾಗೂ ಅರ್ಥಪೂರ್ಣವಾದ ಕಾರಣವಿದೆ. ದೂರ ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳಿಗೆ ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತವಾಗಿ ಊಟವನ್ನು ಕೂಡ ಏರ್ಪಡಿಸಲಾಗುತ್ತಿತ್ತು.

ಹೀಗಾಗಿ ಊಟಕ್ಕೆ ಅಭಿಮಾನಿಗಳಿಗೆ ಸರಿಯಾದ ಸೂಚನೆ ನೀಡಿ ಅವರಿಗೆ ಅಲ್ಲಿ ಹೋಗುವಂತೆ ಮಾಡಲು ಅಲ್ಲಿದ್ದ ಒಬ್ಬ ಸೆಕ್ಯೂರಿಟಿ ಗಾರ್ಡ್ ಅನ್ನು ಹೋಗು ಎಂಬುದಾಗಿ ಹೇಳುತ್ತಾರೆ. ಯಾಕೆಂದರೆ ಉಪೇಂದ್ರ ಅವರ ಬಳಿ ಅದೇ ಜಾಗದಲ್ಲಿ ತುಂಬಾ ಸೆಕ್ಯೂರಿಟಿ ಗಾರ್ಡ್ಗಳಿದ್ದರು. ಆದರೆ ಅದರ ನಿಜವಾದ ಅವಶ್ಯಕತೆ ಊಟದ ಜಾಗದಲ್ಲಿ ಹೆಚ್ಚಾಗಿತ್ತು ಹೀಗಾಗಿ ಉಪೇಂದ್ರ ಅವರು ಅಲ್ಲಿದ್ದ ಒಬ್ಬ ಬಾಡಿ ಗಾರ್ಡ್ ಅನ್ನು ಬೇಗ ಅಲ್ಲಿಗೆ ಹೋಗು ಎನ್ನುವುದಾಗಿ ಹೇಳುತ್ತಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ನೆಟ್ಟಿಗರು ಇದನ್ನು ಬಾಡಿಗಾರ್ಡ್ ಮೇಲೆ ಕೋಪ ಮಾಡಿಕೊಂಡಿದ್ದರು ಎಂಬುದಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳ ಮೇಲಿನ ಕಾಳಜಿಯಿಂದಾಗಿ ಬಾಡಿಗಾರ್ಡ್ ಅನ್ನು ಉಪ್ಪಿ ಅಲ್ಲಿಗೆ ಕಳುಹಿಸುತ್ತಾರೆಯೇ ಹೊರತು ಅಲ್ಲಿ ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಏನು ಇಲ್ಲ.