ಅಕ್ಕ ತಮ್ಮನ ಕಥೆ ಅಂತ ಹೇಳಿ, ಈಗ ತಮ್ಮನ ಪಾತ್ರವೇ ಅಂತ್ಯ: ಸುನಿಲ್ ರವರು ದಿಡೀರ್ ಎಂದು ಕೆಂಡಸಂಪಿಗೆ ಧಾರವಾಹಿ ಬಿಡಲು ಕಾರಣ ಏನು ಗೊತ್ತೇ??

121

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಧಾರವಾಹಿ ಎಂದರೆ ಅದು ಕೆಂಡಸಂಪಿಗೆ ಧಾರವಾಹಿ. ಇದರಲ್ಲಿ ಸುಮನ ಹಾಗೂ ರಾಜೇಶ್ ಅಕ್ಕ ತಮ್ಮನ ಪಾತ್ರ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿತ್ತು. ಈ ರಾಜೇಶ್ ಎನ್ನುವ ಪಾತ್ರವನ್ನು ಅತಿ ಶೀಘ್ರದಲ್ಲೇ ಮುಗಿಸಲು ಧಾರವಾಹಿ ತಂಡ ನಿರ್ಧರಿಸಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನೂ ಈ ರಾಜೇಶ್ ಪಾತ್ರವನ್ನು ನಿರ್ವಹಿಸುತ್ತಿದ್ದದ್ದು ಈ ಹಿಂದೆ ಖ್ಯಾತ ಶನಿ ಪಾತ್ರವನ್ನು ನಿರ್ವಹಿಸಿ ತಕದಿಮಿತ ಡ್ಯಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿ ಎಲ್ಲರ ಮನೆಗೆದ್ದಿದ್ದ ಸುನಿಲ್.

ಇವೆಲ್ಲ ಮುಗಿದು ಒಂದು ವರ್ಷಗಳ ನಂತರ ಕೆಂಡಸಂಪಿಗೆ ಧಾರವಾಹಿಯಲ್ಲಿ ರಾಜೇಶ್ ಪಾತ್ರದ ಮೂಲಕ ಕಿರುತೆರೆಗೆ ಸುನಿಲ್ ಕಮ್ ಬ್ಯಾಕ್ ಮಾಡಿದ್ದರು. ಸುನಿಲ್ ಈ ಧಾರವಾಹಿಯಿಂದ ಹೊರ ಬಂದಿದ್ದು ಈ ಪಾತ್ರಕ್ಕೆ ಬೇರೆ ನಟನನ್ನು ಹಾಕಿಕೊಳ್ಳುವ ಬದಲು ಪಾತ್ರವನ್ನೇ ಮುಗಿಸುವ ನಿರ್ಧಾರಕ್ಕೆ ಧಾರವಾಹಿ ತಂಡ ಬಂದಿದೆ. ಅಷ್ಟಕ್ಕೂ ಸುನಿಲ್ ಧಾರವಾಹಿಯಿಂದ ಹೊರಬರಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿನಿಂದಲೂ ಕೂಡ ಸುನಿಲ್ ಕಷ್ಟದಿಂದಲೇ ಬೆಳೆದುಕೊಂಡು ಬಂದವರು ಎನ್ನುವುದು ನಿಮಗೆ ಶನಿ ಧಾರಾವಾಹಿಯ ಸಂದರ್ಭದಲ್ಲಿ ತಿಳಿದಿರಬಹುದು. ಆಶ್ರಮದಲ್ಲಿ ಬೆಳೆದುಕೊಂಡು ಬಂದು ನಂತರ ಚಿಕ್ಕಪುಟ್ಟ ಪಾತ್ರವನ್ನು ಮಾಡಿ ನಂತರ ಶನಿ ಧಾರಾವಾಹಿಯ ಅವಕಾಶ ಅವರಿಗೆ ಸಿಕ್ಕಿತ್ತು. ಆದರೆ ಒಂದು ವರ್ಷದ ನಂತರ ಯಾವುದೇ ಆಫರ್ ಸಿಗಲಿಲ್ಲ ಕೊನೆಗೆ ಇತ್ತೀಚಿಗಷ್ಟೇ ಕೆಂಡಸಂಪಿಗೆ ಧಾರವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಇದನ್ನು ಬಿಡುವುದಕ್ಕೆ ಕೂಡ ಮುಖ್ಯ ಕಾರಣವಿದ್ದು ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 9 ರಿಂದ ಸುನಿಲ್ ಅವರಿಗೆ ಆಫರ್ ಬಂದಿದ್ದು ಇದಕ್ಕಾಗಿಯೇ ಕೆಂಡಸಂಪಿಗೆ ಧಾರವಾಹಿಯಿಂದ ಹೊರ ಬಂದಿದ್ದಾರೆ.