ಮಗಳಿಗೆ ಪ್ರೀತಿಯ ಪಾಠ ಮಾಡಿದ ಶಾರುಖ್ ಖಾನ್ ಪತ್ನಿ, ಹಾಕಿದ ಕಂಡೀಶನ್ ಏನು ಗೊತ್ತೇ?? ಶಾರುಖ್ ಮಗಳು ಇನ್ನದಾದ್ರು ಈ ರೂಲ್ಸ್ ಫಾಲೋ ಮಾಡ್ತಾರಾ??

13

ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ನಟ ಯಾರು ಎಂಬುದಾಗಿ ಕೇಳಿದಾಗ ಸಿಗುವ ಉತ್ತರ ಶಾರುಖ್ ಖಾನ್ ಎಂಬುದಾಗಿ. ಶಾರುಖ್ ಖಾನ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಕೆಲವೇ ಕೆಲವು ಭಾರತೀಯ ನಟರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಶಾರುಖ್ ಖಾನ್ ಅವರ ಮಗಳಾಗಿರುವ ಸುಹಾನ ಖಾನ್ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚಿಗೆ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗುವ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿಬರುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸುಹಾನ ಖಾನ್ ಅವರ ತಾಯಿ ಹಾಗೂ ಶಾರುಖ್ ಖಾನ್ ಅವರ ಮಡದಿ ಗೌರಿ ಖಾನ್ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಇದರಲ್ಲಿ ಕರಣ ಜೋಹರ್ ಅವರು ಕೇಳುವ ತಲೆಹರಟೆ ಪ್ರಶ್ನೆಗಳ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ ಎಂಬುದಾಗಿ ಭಾವಿಸುತ್ತೇವೆ. ಅದೇ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಗೌರಿ ಖಾನ್ ಅವರಿಗೆ ಕರಣ್ ಜೋಹರ್ ಅವರು ಮಗಳ ಡೇಟಿಂಗ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಎಲ್ಲರೂ ಕೂಡ ಗೌರಿ ಖಾನ್ ಡೇಟಿಂಗ್ ಬಗ್ಗೆ ಪ್ರಶ್ನೆಗೆ ಮೊದಲು ಡೇಟಿಂಗ್ ಮಾಡುವುದು ಬೇಡ ಎಂಬುದಾಗಿ ಹೇಳುತ್ತಾರೆ ಎಂದು ಭಾವಿಸಿದ್ದರು. ಆದರೆ ಮಗಳು ಸುಹಾನ ಖಾನ್ ಗೆ ತಾಯಿ ಗೌರಿ ಖಾನ್ ಅವರು ಒಂದೇ ಸಮಯದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡುವುದು ಬೇಡ ಎಂಬುದಾಗಿ ಉತ್ತರ ನೀಡಿದ್ದಾರೆ. ಒಬ್ಬ ತಾಯಿಯಾಗಿ ಮಗಳಿಗೆ ಇದೆಂತಹ ಸಲಹೆಯನ್ನು ನೀಡುತ್ತಿದ್ದೀರಿ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಗೌರಿ ಖಾನ್ ಅವರ ಬಗ್ಗೆ ನೆಟ್ಟಿಗರು ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.