ಕ್ರಿಕೆಟ್ ನ ಭೀಷ್ಮ ಎಂದೇ ಹೆಸರಾಗಿರುವ ರಾಹುಲ್ ರವರಿಗೆ ಟೆನ್ಶನ್ ಮೇಲೆ ಟೆನ್ಶನ್; ಟೀಮ್ ಮ್ಯಾನೇಜ್ಮೆಂಟ್ ನಲ್ಲಿ ಕಾಡುತ್ತಿರುವ ಸಮಸ್ಯೆ ಏನು ಗೊತ್ತೆ?

19

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ರವಿ ಶಾಸ್ತ್ರಿ ಇದ್ದ ಸಂದರ್ಭದಲ್ಲಿ ಎಲ್ಲರೂ ಕೂಡ ರಾಹುಲ್ ದ್ರಾವಿಡ್ ಅವರು ತಂಡದ ಕೋಚ್ ಆಗಿದ್ದರೆ ಇನ್ನೂ ಉತ್ತಮ ಫಲಿತಾಂಶ ಬರುತ್ತಿತ್ತು ಎಂಬುದಾಗಿ ಮಾತನಾಡಿಕೊಂಡಿದ್ದರು. ಆದರೆ ರಾಹುಲ್ ದ್ರಾವಿಡ್ ಅವರು ಬಂದ ಮೇಲೂ ಕೂಡ ತಂಡದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇದೆ.

ಸದ್ಯಕ್ಕೆ ವಿಶ್ವ ಕಪ್ಕು ಮುನ್ನ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ವಿರುದ್ಧ ಸರಣಿಯನ್ನು ಆಡಲಿದೆ. ಇದಕ್ಕೂ ಮುನ್ನವೇ ಆಡುವ ಬಳಗದಲ್ಲಿ ಎರಡು ಸ್ಥಾನಗಳ ಕಾರಣಕ್ಕಾಗಿ ತಂಡದಲ್ಲಿ ಯಾರನ್ನು ಆಡಿಸುವುದು ಎನ್ನುವುದರ ಕುರಿತಂತೆ ಗೊಂದಲ ಎದ್ದಿದೆ. ಮೊದಲಿಗೆ ವಿಕೆಟ್ ಕೀಪರ್ ಸ್ಥಾನಕ್ಕೆ ಹೋಲಿಸಿದರೆ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ರವರ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಒಂದು ವೇಳೆ ತಂಡ ಲೆಫ್ಟ್ ಹ್ಯಾಂಡ್ ಆಟಗಾರನ ಅವಶ್ಯಕತೆಯನ್ನು ಹೊಂದಿದ್ದರೆ ಪಂತ್ ಈ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ.

ಇನ್ನು ಅಕ್ಷರ್ ಪಟೇಲ್ ಹಾಗೂ ದೀಪಕ್ ಹುಡ ಅವರ ನಡುವೆ ಕೂಡ ಆಲ್ ರೌಂಡರ್ ಸ್ಥಾನಕ್ಕೆ ಪೈಪೋಟಿ ಇದೆ. ಈ ಎರಡು ಸ್ಥಾನಗಳಲ್ಲಿ ಯಾರು ಚೆನ್ನಾಗಿ ಈ ಸರಣಿಗಳಲ್ಲಿ ಪ್ರದರ್ಶನ ನೀಡುತ್ತಾರೋ ಅವರೇ ಟಿ ಟ್ವೆಂಟಿ ವಿಶ್ವ ಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಇದೇ ತಂಡ ವಿಶ್ವಕಪ್ ನಲ್ಲಿ ಖಾಯಂ ಆಗಿರಲಿದೆ. ಈ ಸಮಸ್ಯೆ ಪರಿಹಾರವಾದರೆ ಸಂಪೂರ್ಣ ತಂಡ ನಿಗದಿಯಾದಂತೆ.