ತಂಡದಲ್ಲಿ ನಡೆಯುತ್ತಿದೆ ಬಾರಿ ಲೆಕ್ಕಾಚಾರ: ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಟಿ 20 ಯಲ್ಲಿ ಸ್ಥಾನ ಪಡೆಯಲು ಬಾರಿ ಪೈಪೋಟಿ: ಯಾರ್ಯಾರು ಸ್ಥಾನ ಪಡೆಯಬಹುದು ಗೊತ್ತೇ??

10

ನಮಸ್ಕಾರ ಸ್ನೇಹಿತರೆ ಈಗಾಗಲೇ ಏಷ್ಯಾ ಕಪ್ ಮುಗಿಸಿಕೊಂಡು ಬಂದಿರುವ ಭಾರತೀಯ ಕ್ರಿಕೆಟ್ ತಂಡ ಮಂಗಳವಾರದಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲು ಕಣಕ್ಕಿಳಿಯುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ಅವರು ನಾಯಕನಾಗಿ ಸಾಕಷ್ಟು ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗಿದೆ. ಹೌದು ಯಾಕೆಂದರೆ ಕಳೆದ ಏಷ್ಯಾ ಕಪ್ ನಲ್ಲಿ ಖಾಯಂ ಪ್ಲೇಯಿಂಗ್ 11 ಆಡಿಸಿರಲಿಲ್ಲ ಇದಕ್ಕಾಗಿ ಸಾಕಷ್ಟು ಕಳಪೆ ಮಟ್ಟದ ಫಲಿತಾಂಶ ಕಾಣುವಂತಾಯಿತು.

ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ಗೂ ಮುನ್ನ ಒಂದು ಕಾಯಂ ಪ್ಲೇಯಿಂಗ್ ಹನ್ನೊಂದರ ಬಳಗವನ್ನು ಆರಿಸುವುದು ಅತ್ಯಂತ ಪ್ರಮುಖವಾಗಿದೆ. ಹಾಗಾಗಿ ಪ್ರಮುಖವಾಗಿ ಇಲ್ಲಿ ಎರಡು ಸ್ಥಾನಗಳಿಗೆ ನಾಲ್ಕು ಆಟಗಾರರು ನಡುವೆ ಪೈಪೋಟಿ ನಡೆಯುತ್ತಿದೆ. ಆ ಎರಡು ಸ್ಥಾನಗಳು ವಿಕೆಟ್ ಕೀಪರ್ ಹಾಗೂ ಆಲ್ರೌಂಡರ್. ವಿಕೆಟ್ ಕೀಪರ್ ಸ್ಥಾನಕ್ಕಾಗಿ ರಿಷಭ್ ಪಂಥ್ ಹಾಗೂ ದಿನೇಶ್ ಕಾರ್ತಿಕ್ ಅವರ ನಡುವೆ ನೇರ ಪೈಪೋಟಿ ಇದೆ. ರಿಷಬ್ ಪಂತ್ ಅವರಿಗೆ ಏಷ್ಯಾ ಕಪ್ ನಲ್ಲಿ ಅವಕಾಶಗಳನ್ನು ನೀಡಿದರು ಕೂಡ ಅಷ್ಟೊಂದು ಚೆನ್ನಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಈ ಬಾರಿ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇನ್ನು ಆಲ್ರೌಂಡರ್ ಸ್ಥಾನದಲ್ಲಿ ಅಕ್ಷರ್ ಪಟೇಲ್ ಹಾಗೂ ದೀಪಕ್ ಕೂಡ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಎಡಗೈ ಸ್ಪಿನ್ ಬೌಲರ್ ಬೇಕು ಎಂದರೆ ಅಕ್ಷರ ಪಟೇಲ್ ಅವರನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಬ್ಯಾಟಿಂಗ್ ಆಲ್ರೌಂಡರ್ ಬೇಕು ಎಂದರೆ ದೀಪಕ್ ಅವರ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆಡುವ 11 ಆಟಗಾರರನ್ನು ಆಯ್ಕೆ ಮಾಡುವುದು ಈ ಬಾರಿ ಕೊಂಚಮಟ್ಟಿಗೆ ಕಷ್ಟವಾಗಿರಲಿದೆ.