ಶುರುವಾಯಿತು ಭಾರತದಕ್ಕೆ ಮತ್ತದೇ ಕಾಟ: ಆಸ್ಟ್ರೇಲಿಯಾ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಮರ್ಮಾಘಾತ. ಸ್ಟಾರ್ ಪ್ಲೇಯರ್ ಔಟ್. ಏನಾಗಿದೆ ಗೊತ್ತೇ?

34

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು ಇದರ ಮೊದಲ ಹಂತವಾಗಿ ಭಾರತದಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಆಡಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಭಾರತೀಯ ಕ್ರಿಕೆಟ್ ತಂಡ ಇದೇ ಮೊಹಾಲಿಯಲ್ಲಿ ಪ್ರಾರಂಭ ಆಗಲಿರುವ ಆಸ್ಟ್ರೇಲಿಯಾ ವಿರುದ್ಧ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ಆಯ್ಕೆ ಮಾಡಿದ್ದ ಎಲ್ಲ ತಂಡದ ಸದಸ್ಯರು ಕೂಡ ಆಡಬೇಕಾಗಿತ್ತು ಆದರೆ ಈಗ, ಸರಣಿಯ ಆರಂಭದಲ್ಲಿಯೇ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರು ಸರಣಿಯ ಆರಂಭಕ್ಕೂ ಮುನ್ನವೇ ಮಹಾಮಾರಿಗೆ ತುತ್ತಾಗಿರುವ ಕಾರಣದಿಂದಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸರಣಿಯಿಂದ ಹೊರ ಬರಬೇಕಾಗಿ ಬಂದಿದೆ. ಮಹಾಮಾರಿಯ ಲಕ್ಷಣಗಳು ಶಮಿ ಅವರಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಮಿ ಅವರಿಗೆ ಸಂಪೂರ್ಣವಾಗಿ ವಿಶ್ರಾಂತಿ ನೀಡಲಾಗಿದೆ.

ಶಮಿ ಅವರ ಬದಲಿಗೆ ಅತ್ಯಂತ ಅನುಭವಿ ಬೌಲರ್ ಆಗಿರುವ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದಾಗಿ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಈ ಬಾರಿಯ ವಿಶ್ವಕಪ್ ತಂಡದ ಆಡುವ ಬಳಗದಲ್ಲಿ ಕೂಡ ಶಮಿ ಅವರು ಆಯ್ಕೆ ಆಗಿರಲಿಲ್ಲ ಎನ್ನುವುದು ಮತ್ತೊಂದು ಬೇಸರದ ವಿಚಾರವಾಗಿತ್ತು. ಅವರನ್ನು ಕೇವಲ ಬದಲಿ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈಗಾಗಲೇ ಆಸ್ಟ್ರೇಲಿಯಾ ಆಟಗಾರರು ಕೂಡ ಭಾರತಕ್ಕೆ ಈಗಾಗಲೇ ಬಂದಿದ್ದು ಅಭ್ಯಾಸವನ್ನು ನಡೆಸಲು ಪ್ರಾರಂಭಿಸಿದ್ದಾರೆ.