ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರಬೇಕು ಎಂದರೆ, ನೀವು ಬೇರೆ ಏನು ಬೇಡ, ಹೀಗೆ ಮಾಡಿ ಸಾಕು ಎಂದ ಚಾಣಕ್ಯ. ಏನು ಮಾಡಬೇಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಆಚಾರ್ಯ ಚಾಣಕ್ಯರನ್ನು ಭಾರತೀಯ ಇತಿಹಾಸದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂಬುದಾಗಿ ಕರೆಯಲಾಗುತ್ತದೆ. ಅವರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಮನೆಯಲ್ಲೇ ಲಕ್ಷ್ಮಿ ಸದಾ ಕಾಲ ನೆಲೆಸಿರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ ಅದೇನೆಂಬುದನ್ನು ತಿಳಿಯೋಣ ಬನ್ನಿ.
ಲಕ್ಷ್ಮಿ ಒಮ್ಮೆ ಒಲಿದರೆ ಅವರ ಜೀವನದಲ್ಲಿ ಹಣದ ಹೊಳೆಹರಿಯಲಿದೆ ಇದು ನಿಜ ಆದರೆ, ಲಕ್ಷ್ಮಿ ಚಂಚಲೆ ಆಗಿದ್ದು ಹಾಕಿಯನ್ನು ಒಲಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ವಿಚಾರವಾಗಿದೆ. ಚಾಣಕ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಒಂದು ಮನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ ಹಾಗೂ ಸಾಮರಸ್ಯದಿಂದ ಜೀವನ ಮಾಡುತ್ತಿದ್ದಾರೆ ಎಂದರೆ ಅಲ್ಲಿ ಲಕ್ಷ್ಮಿ ನೆಲೆಸಲು ಇಷ್ಟಪಡುತ್ತಾಳೆ ಎಂಬುದಾಗಿ ತಿಳಿದು ಬಂದಿದೆ. ಅಂತಹ ಮನೆಗಳಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದಾಗಿ ಹಣದ ಹರಿವು ಯಾವತ್ತೂ ಕೂಡ ನಿಲ್ಲುವುದಿಲ್ಲ, ಜನರು ಸಂತೋಷದಿಂದ ಕೂಡ ಬಾಳುತ್ತಾರೆ. ಜ್ಞಾನಿಗಳ ಹಾಗೂ ಮಹಾತ್ಮರ ಮಾರ್ಗದರ್ಶನ ಹಾಗೂ ಬೋಧನೆಗಳನ್ನು ಅನುಸರಿಸುವ ಮನೆಯಲ್ಲಿ ಕೂಡ ಲಕ್ಷ್ಮಿ ನೆಲೆಸಿರುತ್ತಾಳೆ.

ಮೂರ್ಖರು ಆಡುವ ಮಾತುಗಳನ್ನು ಕೇಳದೆ ಇರುವ ಬುದ್ಧಿವಂತರ ಮನೆಯಲ್ಲಿ ಲಕ್ಷ್ಮಿ ಖುದ್ದಾಗಿ ಅವಳೇ ಬರುತ್ತಾಳೆ. ಹಿರಿಯರನ್ನು ಗೌರವಿಸಿರುವ ಕಿರಿಯರ ಮನೆಯಲ್ಲಿ ಕೂಡ ಲಕ್ಷ್ಮಿ ನೆಲೆಸಿರುತ್ತಾಳೆ. ತಮ್ಮ ಜೀವನಕ್ಕಾಗಿ ಅತ್ಯಂತ ಕಷ್ಟ ಪಟ್ಟು ದುಡಿಯುವ ಜನರ ಮನೆಯಲ್ಲಿ ಕೂಡ ಲಕ್ಷ್ಮಿ, ತಡವಾಗಿ ಆದರೂ ಖಂಡಿತವಾಗಿ ಬಂದೇ ಬರುತ್ತಾಳೆ. ಹೀಗಾಗಿ ನಿಮ್ಮ ಮನೆಯಲ್ಲಿ ಕೂಡ ಲಕ್ಷ್ಮಿ ನೆಲೆಸಬೇಕು ಎಂದಾದರೆ ಚಾಣಕ್ಯ ಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವ ಈ ಮೇಲಿನ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.