ಬಿಗ್ ಬಾಸ್ OTT ಫೈನಲ್ ನಲ್ಲಿ ನಡೆಯಿತೇ ಮಹಾ ಮೋಸ?? ಅದ್ಯಾವ ಕಾರಣಕ್ಕೆ ಈಗಾಯ್ತು ಎಂದ ಫ್ಯಾನ್ಸ್. ಏನಂತೆ ಗೊತ್ತೇ??

45

ನಮಸ್ಕಾರ ಸ್ನೇಹಿತರೆ ಕೊನೆಗೂ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಮುಗಿದಿದ್ದು ಇದೇ ಸೆಪ್ಟೆಂಬರ್ 24 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರಾರಂಭ ಆಗಲಿದೆ. ಈ ಬಾರಿಯ ಬಿಗ್ ಬಾಸ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ.

ಇನ್ನು ಈ ಕಾರ್ಯಕ್ರಮವನ್ನು ರೂಪೇಶ್ ಶೆಟ್ಟಿ ಅವರು ಗೆದ್ದುಕೊಂಡಿದ್ದು ಜನ ಮೆಚ್ಚಿದ ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ 5 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ ಹಾಗೂ ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾರೆ. ಕೇವಲ ರೂಪೇಶ್ ಶೆಟ್ಟಿ ಮಾತ್ರವಲ್ಲದೆ ಅವರ ಜೊತೆಗೆ ಆರ್ಯವರ್ಧನ್ ಗುರೂಜಿ, ಸಾನಿಯಾ ಅಯ್ಯರ್ ಹಾಗೂ ರಾಕೇಶ್ ಅಡಿಗ ಅವರು ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಮುಖ್ಯ ಬಿಗ್ ಬಾಸ್ ಗೆ ತೇರ್ಗಡೆಯಾಗಿದ್ದಾರೆ. ಇನ್ನು ಸದ್ಯಕ್ಕೆ ಮೊದಲಿಗೆ ಜನ ಮೆಚ್ಚಿದ ಸ್ಪರ್ಧಿಗೆ 2.8 ಲಕ್ಷ ರೂಪಾಯಿ ಬಹುಮಾನ ನೀಡುತ್ತಾರೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಈಗ ಬಿಗ್ ಬಾಸ್ ನ ಆಯೋಜಕರು ಅಭ್ಯರ್ಥಿಗೆ ಪೂರ್ತಿಯಾಗಿ 5 ಲಕ್ಷ ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮೋಸ ನಡೆದಿದೆ ಎಂಬುದಾಗಿ ಕೆಲವು ವರ್ಗದ ಬಿಗ್ ಬಾಸ್ ಪ್ರೇಕ್ಷಕರು ಆರೋಪಿಸಿದ್ದಾರೆ.

ಹೌದು ಕೆಲವರ ಪ್ರಕಾರ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಮನೋರಂಜನೆ ನೀಡಿದ್ದಾರೆ ಎಂಬುದಾಗಿ ಹೇಳಿದ್ದು ಅವರು ಗೆಲ್ಲ ಬೇಕಾಗಿತ್ತು ಆದರೆ ಅವರ ಬದಲಿಗೆ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಹೀಗಾಗಿ ವಿಜೇತರ ಆಯ್ಕೆಯಲ್ಲಿ ಮೋಸ ನಡೆದಿದೆ ಎಂಬುದಾಗಿ ಬಿಗ್ ಬಾಸ್ನ ಕೆಲವು ವರ್ಗದ ಪ್ರೇಕ್ಷಕರು ಆರೋಪಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.