ದರ್ಶನ್ ಅವರಿಗೆ ಸೈಮಾ ಕಾರ್ಯಕ್ರಮಕ್ಕೆ ಕರೆಸಿ ಎರಡೇ ದಿನಕ್ಕೆ ಏನ್ ಹೇಳಿದ್ದಾರೆ ಗೊತ್ತಾ ? ಚಿತ್ರರಂಗವೇ ಶಾಕ್

6,567

ನಮಸ್ಕಾರ ಸ್ನೇಹಿತರೇ, ಇದೇ ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೊದಲ ಬಾರಿಗೆ ಎಂಟ್ರಿ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಲು ಕಾರಣರಾಗಿದ್ದರು ಎಂದರು ತಪ್ಪಾಗಲಾರದು.

ನೀವು ಕೆಲವು ವರ್ಷಗಳ ಹಿಂದೆ ನೆನಪಿಸಿಕೊಂಡರೆ ಸಂದರ್ಶನ ಒಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವಾಗ ಇಂತಹ ಅವಾರ್ಡ್ ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆಯುತ್ತದೆಯೋ, ಆ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ನಟರಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆಯೋ ಅಂದು ನಾನು ಆ ಕಾರ್ಯಕ್ರಮಕ್ಕೆ ಭಾಗವಹಿಸುತ್ತೇನೆ ಎಂಬುದಾಗಿ ಹೇಳಿದ್ದರು. ಅದೇ ರೀತಿ ಈ ಬಾರಿಯ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ತನ್ನ ಹತ್ತನೇ ವರ್ಷದ ಆಚರಣೆಯನ್ನು ನಮ್ಮ ಬೆಂಗಳೂರಿನಲ್ಲಿ ಮಾಡಿದೆ. ಇದೇ ಕಾರಣಕ್ಕಾಗಿ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ ಡಿ ಬಾಸ್ ಈ ಕಾರ್ಯಕ್ರಮಕ್ಕೆ ಹಾಜರಿದ್ದರು ಎಂದರು ತಪ್ಪಾಗಲಾರದು.

ಇನ್ನು ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಎರಡು ದಿನಕ್ಕೆ ಸೈಮ ಡಿ ಬಾಸ್ ಅವರ ಕುರಿತಂತೆ ನೀಡಿರುವ ಹೇಳಿಕೆ ಹೇಳಿದರೆ ನೀವು ಕೂಡ ದಂಗಾಗ್ತೀರಾ. ಹೌದು ತಮ್ಮ ಟ್ವಿಟರ್ ಖಾತೆಯಲ್ಲಿ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಡಿ ಬಾಸ್ ಕಾಣಿಸಿಕೊಂಡಿದ್ದರು ಸೈಮಾ ಕಡೆಯಿಂದ ನಿಮಗೆ ಧನ್ಯವಾದಗಳು ಎಂಬುದಾಗಿ ಡಿ ಬಾಸ್ ರವರಿಗೆ ಸೈಮಾ ಸಂಸ್ಥೆ ಹೇಳಿದೆ. ಒಟ್ಟಾರೆಯಾಗಿ ಹೇಳುವುದಾದರೆ ದಕ್ಷಿಣ ಹಾಗೂ ಉತ್ತರ ಭಾರತದ ಚಿತ್ರರಂಗಗಳಿಂದ ಹಲವಾರು ಸೆಲೆಬ್ರಿಟಿಗಳು ಬಂದಿದ್ದರು ಕೂಡ ಪ್ರಮುಖವಾಗಿ ಮಿಂಚಿದ್ದು ಡಿ ಬಾಸ್ ಎನ್ನಬಹುದಾಗಿದೆ.