ಮುಗಿದೇ ಹೋಯಿತು ನಿಮ್ಮ ಕಷ್ಟದ ದಿನಗಳು: ಅದೃಷ್ಟ ಹೊತ್ತು ತರಲಿದ್ದಾರೆ ಶನಿ ದೇವ. ಯಾವ ರಾಶಿಗಳಿಗೆ ಗೊತ್ತೇ??

34,352

ನಮಸ್ಕಾರ ಸ್ನೇಹಿತರೆ ನ್ಯಾಯದ ದೇವರಾಗಿರುವ ಹಾಗೂ ಗ್ರಹಮಂಡಲದಲ್ಲಿ ತನ್ನದೇ ಆದಂತಹ ಪ್ರಭಾವವನ್ನು ಹೊಂದಿರುವ ಶನಿ ಸದ್ಯಕ್ಕೆ ಮಕರ ರಾಶಿಯಲ್ಲಿ ಹಿಮ್ಮುಖ ನಡೆಯಲ್ಲಿ ಇದ್ದಾನೆ. ಇದೇ ಅಕ್ಟೋಬರ್ 23ರಂದು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ ಇದೇ ಸಂದರ್ಭದಲ್ಲಿ 3 ರಾಶಿಯವರಿಗೆ ಮಹಾಪುರುಷ ರಾಜಯೋಗ ಪ್ರಾಪ್ತಿಯಾಗಲಿದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ; ಶನಿಯ ಕಾರಣದಿಂದಾಗಿ ಮೇಷ ರಾಶಿಯವರ ರಾಶಿಯಲ್ಲಿ ಪಂಚಮಹಾಪುರುಷ ಯೋಗ ಪ್ರಾಪ್ತಿಯಾಗಲಿದೆ. ಕೆಲಸ ಹಾಗೂ ವ್ಯಾಪಾರ ಎರಡು ಕ್ಷೇತ್ರಗಳಲ್ಲಿ ನಿರೀಕ್ಷಿತ ಲಾಭಗಳು ಹಾಗೂ ಆದಾಯ ಹೆಚ್ಚಾಗಲಿದೆ. ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗಲಿದೆ ಹಾಗೂ ಕೆಲಸವನ್ನು ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗಲಿದೆ. ನಿಮ್ಮ ಮನಸ್ಸಿಗೆ ಇಷ್ಟವಾಗಿರುವ ಯಾವುದೇ ಕೆಲಸವನ್ನು ಪ್ರಾರಂಭಿಸಬಹುದಾಗಿದೆ ಹಾಗೂ ವ್ಯಾಪಾರದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಲಾಭ ಸಿಗಲಿದೆ.

ಧನು ರಾಶಿ; ಧನು ರಾಶಿಯವರಿಗೆ ಶನಿ ಪ್ರಸನ್ನ ಆಗಲಿದ್ದಾನೆ. ಕೈ ಸೇರದೆ ಉಳಿದುಕೊಂಡಿರುವ ಹಣ ನಿಮ್ಮ ಕೈ ಸೇರಲಿದ್ದು ನಿಮ್ಮ ಸಂಬಳದಲ್ಲಿ ಕೂಡ ಗಣನೀಯ ಹೆಚ್ಚಳ ಕಂಡು ಬರಲಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವ ಜನರು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ. ವ್ಯಾಪಾರದಲ್ಲಿ ಕೂಡ ಹಣದ ಹರಿವು ಹೆಚ್ಚಾಗಲಿದೆ.

ಮೀನ ರಾಶಿ; ಶನಿಯ ನೇರ ಸಂಚಾರದ ನೇರ ಪರಿಣಾಮ ಮೀನ ರಾಶಿಯವರ ಮೇಲೆ ಬೀಳಲಿದೆ. ಮೀನ ರಾಶಿಯವರ ಜೀವನದಲ್ಲಿ ಆದಾಯಕ್ಕಾಗಿ ಹಲವಾರು ಬಾಗಿಲುಗಳು ತೆರೆಯಲಿದ್ದು ಆದಾಯವನ್ನು ಕೂಡ ಬೇಕಾದ ಹಾಗೆ ಹೆಚ್ಚಿಸಿಕೊಳ್ಳಬಹುದಾಗಿದೆ. ಹೊಸ ಸಂಪರ್ಕಗಳು ಇನ್ನಷ್ಟು ಹೆಚ್ಚಿನ ಲಾಭವನ್ನು ತರಲಿದ್ದು, ಹೊಸ ಕಾರು ಹಾಗೂ ಮನೆಯನ್ನು ಖರೀದಿಸುವ ಯೋಗವು ಕೂಡ ಮೂಡಿಬರಲಿದೆ. ಈ ರಾಶಿಯವರಿಗೆ ಶನಿಯ ಆಶೀರ್ವಾದದಿಂದಾಗಿ ಮಹಾಪುರುಷ ರಾಜಯೋಗ ಮೂಡಿಬರಲಿದೆ.