ನಾನು ಎಬಿಡಿ ರವರನ್ನು ಔಟ್ ಮಾಡಿದಾಗ ಧೋನಿ ನನಗೆ ಬಂದು ಬೈದಿದ್ದರು ಎಂದ CSK ಬೌಲರ್. ಯಾಕೆ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಯಾರು ಎಂಬುದಾಗಿ ಕೇಳಿದರೆ ನಮಗೆ ಸಿಗುವಂತಹ ಅತ್ಯಂತ ದೊಡ್ಡ ಉತ್ತರ ಎಂದರೆ ಅದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ. ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ತಮ್ಮ ಮಾಸ್ಟರ್ ಮೈಂಡ್ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಕೇವಲ ಹೃದಯ ಮಾತ್ರವಲ್ಲದೆ ಐಪಿಎಲ್ ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಕೂಡ ತಮ್ಮ ತಂಡಕ್ಕೆ ಗೆದ್ದು ಕೊಟ್ಟಿದ್ದಾರೆ.
ಆದರೆ ಇಂತಹ ಯಶಸ್ವಿ ನಾಯಕನ ವಿರುದ್ಧ ಅದೇ ತಂಡದ ಮಾಜಿ ಆಟಗಾರ ಆಗಿರುವ ಈಶ್ವರ್ ಪಾಂಡೆ ದೊಡ್ಡ ಮಟ್ಟದ ಆರೋಪವನ್ನು ಈಗ ಹೊರಿಸಿದ್ದಾರೆ. ಹೌದು ಈ ಹಿಂದೆ ಕೂಡ ಧೋನಿ ಅವರಿಂದ ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ ಎಂಬುದಾಗಿ ಕೂಡ ಅಪವಾದವನ್ನು ಮಾಡಿದ್ದರು. ಈಗ ಮುಂದುವರೆದು 2015ರ ಐಪಿಎಲ್ ನಲ್ಲಿ ಎಬಿಡಿ ವಿಲಿಯರ್ಸ್ ಅವರನ್ನು ಔಟ್ ಮಾಡಿದಕ್ಕಾಗಿ ಮಹೇಂದ್ರ ಸಿಂಗ್ ಧೋನಿ ನನ್ನನ್ನು ತೀವ್ರವಾಗಿ ನಿಂದಿಸಿದ್ದಾರೆ ಎಂಬುದಾಗಿ ಈಶ್ವರ್ ಪಾಂಡೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ಆಶ್ಚರ್ಯಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಆ ಆವೃತ್ತಿಯ 37ನೇ ಪಂದ್ಯವಾಗಿತ್ತು. ಆ ಓವರ್ ನಲ್ಲಿ ಬೌಲಿಂಗ್ ಮಾಡುವ ಮುನ್ನವೆ ನನಗೆ ಮಹೇಂದ್ರ ಸಿಂಗ್ ಧೋನಿ ಅವರು ಯಾವುದೇ ಯಾರ್ಕರ್ ಹಾಕಬೇಡಿ ಉತ್ತಮವಾಗಿ ಬೌಲಿಂಗ್ ಮಾಡಿ ಎಂಬುದಾಗಿ ಹೇಳಿದ್ದರು. ನಾನು ಸತತವಾಗಿ ನಾಲ್ಕು ಡಾಟ್ ಬೌಲ್‌ಗಳನ್ನು ಎಬಿಡಿ ಅವರಿಗೆ ಎಸೆದೆ. ಐದನೇ ಎಸೆತವನ್ನು ಎಬಿಡಿ ವಿಲಿಯರ್ಸ್ ಬೌಂಡರಿಗೆ ಬಾರಿಸುತ್ತಾರೆ. ಆಗ ನಾನು ಅವರನ್ನು ಔಟ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಯಾರ್ಕರ್ ಬೌಲಿಂಗ್ ಮಾಡಿ ಅವರನ್ನು ಔಟ್ ಮಾಡುತ್ತೇನೆ. ಆಗ ನನ್ನ ಬಳಿ ಬಂದ ಮಾಹಿ ಬಾಯ್ ನಾನು ನಿಮಗೆ ಹೇಳಿಲ್ಲವೇ ಯಾರ್ ಕಾರ್ಬೊಲ್ ಮಾಡಬೇಡಿ ಎಂಬುದಾಗಿ ಇರಲಿ ಪರವಾಗಿಲ್ಲ ಮುಂದಿನ ಬಾರಿ ನೋಡಿಕೊಳ್ಳಿ ಎಂಬುದಾಗಿ ಕೋಪದಿಂದ ಹೇಳಿದ್ದಾರೆ ಎಂಬುದಾಗಿ ಈಶ್ವರ್ ಪಾಂಡೆ ಹೇಳಿದ್ದಾರೆ. ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.