ಬಿಗ್ ಬಾಸ್ ನಲ್ಲಿ ಮತ್ತೊಂದು ವಾಗ್ವಾದ: ನಾನು ಇನ್ನು ಮುಂದೆ ಮಾತನಾಡಲ್ಲ ಎಂದ ಜೋಡಿ: ಸಾನಿಯಾ – ರೂಪೇಶ್ ಮಧ್ಯೆ ಏನಾಗುತ್ತಿದೆ ಗೊತ್ತೇ?

36

ನಮಸ್ಕಾರ ಸ್ನೇಹಿತರೇ ಕೆಲವು ವಾರಗಳ ಹಿಂದೆ ಪ್ರಾರಂಭ ಆಗಿದ್ದ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಎಷ್ಟು ಬೇಗ ಪ್ರಾರಂಭವಾಯಿತು ಎಷ್ಟು ಬೇಗ ಮುಗಿದಿದೆ ಎಂದು ತಿಳಿಯದಷ್ಟರ ಮಟ್ಟಿಗೆ ವೇಗವಾಗಿ ನಡೆದಿದೆ. ದಿನಕಳೆದಂತೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಮಾಡುವ ಕಿರಿಕ್, ಹಾಸ್ಯ ಚಟಾಕಿ ಹಾಗೂ ಸ್ಪರ್ಧಿಗಳ ನಡುವೆ ನಡೆಯುವ ಜಗಳ, ಪ್ರೀತಿ ಎಲ್ಲವೂ ಕೂಡ ಬಿಗ್ ಬಾಸ್ ಪ್ರೇಕ್ಷಕರ ಕುತೂಹಲವನ್ನು ದಿನದಿಂದ ದಿನಕ್ಕೆ ಕಾರ್ಯಕ್ರಮದ ಕುರಿತಂತೆ ಹೆಚ್ಚಿಸುತ್ತಿದೆ.

ಇನ್ನು ಈ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಕಲರವ ಕೂಡ ಕೇಳಿ ಬರುತ್ತಿದೆ. ಮೊದಲಿಗೆ ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸಗೌಡ ಜೋಡಿ ಸುದ್ದಿಗೆ ಬಂದರೆ, ಸದ್ಯಕ್ಕೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ರವರ ನಡುವಿನ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲಿ ಇಬ್ಬರು ಕೂಡ ಪರಿಚಿತರಾಗಿ ಸ್ನೇಹಕ್ಕೂ ಮಿಗಿಲಾದ ಸಂಬಂಧವನ್ನು ಹೊಂದಿದಂತೆ ಇದ್ದರು. ಇವರಿಬ್ಬರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹಲವಾರು ಜನರು ಕ್ಯಾತೆ ತೆಗೆದಿದ್ದು ಕೂಡ ಉಂಟು. ಆದರೆ ದಿನ ಕಳೆದಂತೆ ಇವರಿಬ್ಬರ ನಡುವೆ ಜಗಳ ಹೆಚ್ಚಾಗುತ್ತಿದೆ ಎಂಬುದಾಗಿ ಕಾಣುತ್ತಿದೆ.

ಅದರಲ್ಲೂ ಒಮ್ಮೆ ಸಾನ್ಯಾ ಅಯ್ಯರ್ ರೂಪೇಶ್ ಅವರನ್ನು ನೀನು ಉದಯ್ ತರ ಆಡ್ತಾ ಇದೀಯಾ ಎಂಬುದಾಗಿ ಅಸಹನೀಯವಾಗಿ ಹೇಳಿದ್ದು ಕೂಡ ಉಂಟು. ಅದಕ್ಕೆ ನೀನು ನನ್ನನ್ನು ಅವರಿವರ ಜೊತೆಗೆ ಕಂಪೇರ್ ಮಾಡಬೇಡ ಎಂಬುದಾಗಿ ರೂಪೇಶ್ ಹೇಳಿದ್ದರು. ಇನ್ನೂ ಇವರಿಬ್ಬರ ನಡುವಿನ ಜಗಳ ಈಗ ಮುಂದಿನ ಹಂತಕ್ಕೆ ಹೋಗಿದ್ದು ರೂಪೇಶ್ ಅವರು ಇನ್ನು ಮುಂದೆ ನಾನು ನಿನ್ನ ಜೊತೆ ಮಾತನಾಡಲ್ಲ ಎಂಬುದಾಗಿ ಹೇಳಿದ್ದು ಇದು ಸಾನ್ಯಾ ಅವರಿಗೆ ಸಾಕಷ್ಟು ಬೇಸರವನ್ನು ತರಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.