ಅಪ್ಪಿ ತಪ್ಪಿಯೂ ಕೂಡ ಪರ್ಸ್ ನಲ್ಲಿ ಇವುಗಳನ್ನು ಇಡಬೇಡಿ, ಕೈಯಲ್ಲಿ ಹಣ ನಿಲ್ಲುವುದಿಲ್ಲ. ಇಂದೇ ತೆಗೆದು ಹಾಕಿ. ಯಾವ್ಯಾವ ವಸ್ತುಗಳು ಗೊತ್ತೇ??

58

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ವಾಸ್ತುಶಾಸ್ತ್ರ ಹಾಗೂ ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಹಣ ಎಂದರೆ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿ ಎನ್ನುವದಾಗಿ ತಿಳಿದಿದೆ. ನಾವು ಹಣವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತೇವೆ. ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವ ಮೂಲಕ ಅದು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಿ ಸಂಪತ್ತು ಕುಗ್ಗುವಂತೆ ಮಾಡುತ್ತಾಳೆ. ಹೀಗಾಗಿ ಅಪ್ಪಿತಪ್ಪಿಯೂ ಕೂಡ ಹಣದ ಜೊತೆ ಅಥವಾ ಪರ್ಸ್ ನಲ್ಲಿ ಈ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಲೇಬಾರದು.

ಯಾವತ್ತೂ ಕೂಡ ನೀವು ಹಣವನ್ನು ಇಟ್ಟುಕೊಳ್ಳಲು ಹರಿದ ಪರ್ಸ್ ಅನ್ನು ಉಪಯೋಗಿಸಬೇಡಿ. ಹರಿದ ಪರ್ಸ್ ನಿಮ್ಮ ಆರ್ಥಿಕ ಸ್ಥಿತಿಯನ್ನು ಕೆಳಮಟ್ಟಕ್ಕೆ ತಗ್ಗುವಂತೆ ಮಾಡುತ್ತದೆ. ಹೀಗಾಗಿ ಯಾವತ್ತು ಹರಿದ ಪರ್ಸ್ ಉಪಯೋಗಿಸಬೇಡಿ. ಸಾಮಾನ್ಯವಾಗಿ ಪರ್ಸ್ ನಲ್ಲಿ ಹಣವನ್ನು ಇಟ್ಟುಕೊಳ್ಳುವವರು ನೋಟ್ ಅನ್ನೋ ಸರಿಯಾಗಿ ಮಡಚಿ ಇಡುವುದಿಲ್ಲ. ಕೆಟ್ಟದಾಗಿ ತುಂಬಿಡುತ್ತಾರೆ. ಪರ್ಸ್ ನಲ್ಲಿ ನೋಟ್ ಅನ್ನು ಸರಿಯಾಗಿ ಮಡಚಿ ಇಡಿ.

ಬೇರೆ ಬೇರೆ ಕಡೆಗಳಲ್ಲಿ ಪಾವತಿ ಮಾಡಿರುವ ಹಳೆಯ ಬಿಲ್ ಅನ್ನು ಪರ್ಸಿನಲ್ಲಿ ಇಟ್ಟುಕೊಳ್ಳಲು ಹೋಗಬೇಡಿ ಅದನ್ನು ತಕ್ಷಣ ಎಸೆದುಬಿಡಿ. ಹಳೆಯ ಬಿಲ್ ಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವ ಮೂಲಕ ನೀವು ಲಕ್ಷ್ಮೀದೇವಿಗೆ ಅಪಮಾನ ಮಾಡಿದಂತಾಗುತ್ತದೆ. ಶಾಸ್ತ್ರಗಳ ಪ್ರಕಾರ ದೇವರ ಫೋಟೋಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬಾರದು. ದೇವರ ಫೋಟೋವನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು.

ಹಣ ಇಡುವ ಪರ್ಸಿನಲ್ಲಿ ನಿಮ್ಮ ಮೃತ ಸಂಬಂಧಿಕರ ಫೋಟೋವನ್ನು ಇಟ್ಟುಕೊಳ್ಳುವುದು ನಿಮಗೆ ಅಶುಭ ಫಲವನ್ನು ತೋರಿಸುತ್ತದೆ. ಯಾವುದೋ ಸಂದರ್ಭದಲ್ಲಿ ನೀವು ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಸಾದದ ರೂಪದಲ್ಲಿ ಸಿಗುವ ಹೂವನ್ನು ನೀವು ಪರ್ಸಿನಲ್ಲಿ ಇಟ್ಟುಕೊಳ್ಳುತ್ತೀರಿ. ಅವು ಪರ್ಸನಲ್ ಒಳಗೆ ಹೋಗುತ್ತವೆ ಇಂತಹ ಒಣಗಿದ ಹೂಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಕೊನೆಯದಾಗಿ ಪರ್ಸಿನಲ್ಲಿ ಕೀಯನ್ನು ಕೂಡ ಇಟ್ಟುಕೊಳ್ಳಬಾರದು ಇದರಿಂದಾಗಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಇವಿಷ್ಟು ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.