ಬಿಗ್ ನ್ಯೂಸ್: ವಿಶ್ವಕಪ್ ಗಾಗಿ ಹೊಸ ಜರ್ಸಿ ಬಿಡುಗಡೆ ಮಾಡಿದ ಟೀಮ್ ಇಂಡಿಯಾ. ಹೇಗಿದೆ ಗೊತ್ತೇ?? ವೈರಲ್ ಆಯಿತು ವಿಡಿಯೋ.

6

ಐಸಿಸಿ ಟಿ20 ವಿಶ್ವಕಪ್ ಮುಂದಿನ ತಿಂಗಳು ಅಕ್ಟೋಬರ್ 16ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಭಾರತ ತಂಡ ಈಗಾಗಲೇ 15 ಸದಸ್ಯರ ತಂಡವನ್ನು ಪ್ರಕಟಣೆ ಮಾಡಿ, 4 ಹೆಚ್ಚುವರಿ ಆಟಗಾರರ ಲಿಸ್ಟ್ ಸಹ ಬಿಡುಗಡೆ ಮಾಡಿದೆ. ಜಸ್ಪ್ರೀತ್ ಬುಮ್ರ ಅವರು ಹಾಗು ಹರ್ಷಲ್ ಪಟೇಲ್ ಅವರು ತಂಡಕ್ಕೆ ಮರಳಿ ಬಂದಿರುವುದು ಬೌಲಿಂಗ್ ತಂಡದ ಬಲವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ.

ಅಷ್ಟೇ ಅಲ್ಲದೆ, ಈ ವರ್ಷ ವಿಶ್ವಕಪ್ ನಲ್ಲಿ ಭಾರತ ತಂಡವು ಹೊಸ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದೆ ಎನ್ನುವ ಹೊಸ ಮಾಹಿತಿ ಸಿಕ್ಕಿದೆ. ಇದನ್ನು ಖುದ್ಧು ಭಾರತ ತಂಡ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದೆ. ಒಂದು ಜಾಹಿರಾತನ್ನು ಭಾರತ ತಂಡದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ, ಅದರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಅವರು ಈ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರೋಹಿತ್ ಶರ್ಮಾ ಅವರು, “ನೀವು ನಮ್ಮನ್ನು ಕ್ರಿಕೆಟಿಗರಾಗಿ ನೊಡಿರುತ್ತೀರಿ ..” ಎಂದು ಹೇಳುತ್ತಾರೆ.

ನಂತರ ಶ್ರೇಯಸ್ ಅಯ್ಯರ್ ಅವರು, “ನಿಮ್ಮ ಪ್ರೋತ್ಸಾಹದಿಂದ ನಮಗೆ ಶಕ್ತಿ ಬಂದಿದೆ..” ಎಂದು ಹೇಳಿ, ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಕೂಡ ಭಾರತ ತಂಡದ ಹೊಸ ಜೆರ್ಸಿಯ ಭಾಗವಾಗಿರಿ..ಎಂದು ಸೋಷಿಯಲ್ ಮೀಡಿಯದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಹೊಸ ಜೆರ್ಸಿಯನ್ನು ಎಂ.ಪಿ.ಎಲ್ ಸಂಸ್ಥೆ ತಯಾರಿಸುತ್ತಿದೆ. ಭಾರತ ತಂಡ ಈಗ ಯಾವ ರೀತಿಯ ಹೊಸ ಜೆರ್ಸಿ ಧರಿಸಿ ಅಡುತ್ತಾರೆ ಎಂದು ತಿಳಿಯಲು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ. ಈಗಾಗಲೇ ಆಯ್ಕೆಯಾಗಿರುವ ತಂಡದ ಜೊತೆಗೆ ಭಾರತ ತಂಡ ಹೇಗೆ ಯಾವ ರೀತಿ ಪ್ರದರ್ಶನ ನೀಡುತ್ತದೆ ಎಂದು ನೋಡಬೇಕಿದೆ.