ಟೀಮ್ ಇಂಡಿಯಾ ದಲ್ಲಿ ಇರುವ ಸಮಸ್ಯೆಯನ್ನು ಎತ್ತಿ ತೋರಿಸಿದ ಉತ್ತಪ್ಪ: ಇದೊಂದು ಸಮಸ್ಯೆ ಪರಿಹರಿಸಿ ಮೊದಲು. ಯಾವ ಸ್ಥಾನಕ್ಕೆ ಪೈಪೋಟಿ ಗೊತ್ತೇ??
ನಮಸ್ಕಾರ ಸ್ನೇಹಿತರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಈ ತಂಡದ ಕುರಿತಂತೆ ಮಾಜಿ ಆಟಗಾರ ಆಗಿರುವ ರಾಬಿನ್ ಉತ್ತಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಬಿನ್ ಉತ್ತಪ್ಪ ಅವರ ಪ್ರಕಾರ ಬಿಸಿಸಿಐ ಆಯ್ಕೆ ಮಾಡಿರುವ ಈ 15 ಆಟಗಾರರ ತಂಡ ಬಹುತೇಕ ಪರ್ಫೆಕ್ಟ್ ಆಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಹಾಲ್, ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ಅವರ ಸ್ಪಿನ್ ವಿಭಾಗದಲ್ಲಿ ಆಯ್ಕೆ ಅತ್ಯುತ್ತಮವಾಗಿದೆ ಎಂಬುದಾಗಿ ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ. ಅಗ್ರ ಕ್ರಮ ಅಂಕದಲ್ಲಿ ನಾಲ್ಕು ಬ್ಯಾಟ್ಸ್ ಮ್ಯಾನ್ ಗಳ ಆಯ್ಕೆ ಕೂಡ ಇಲ್ಲಿ ಪರಿಪೂರ್ಣವಾಗಿದೆ ಎಂಬುದಾಗಿ ರಾಬಿನ್ ಉತ್ತಪ್ಪ ಹೇಳಿದ್ದಾರೆ. ತಂಡದಲ್ಲಿ ಐದನೇ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇಬ್ಬರು ಆಟಗಾರರ ನಡುವೆ ಸಾಕಷ್ಟು ಪೈಪೋಟಿ ಇದೆ ಇದು ಅತ್ಯಂತ ಮುಖ್ಯ ಸ್ಥಾನವಾಗಿದೆ ಎಂಬುದಾಗಿ ರಾಬಿನ್ ಉತ್ತಪ್ಪ ಹೇಳಿದ್ದು, ದೀಪಕ್ ಅಥವಾ ರಿಷಬ್ ಪಂತ್ ಇಬ್ಬರ ನಡುವೆ ಒಬ್ಬರು ಆಡಬೇಕಾಗಿದೆ ಎಂದು ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಆಸ್ಟ್ರೇಲಿಯಾದ ಸ್ಪೀಡ್ ಪಿಚ್ ಗಳಲ್ಲಿ ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ. ಎಡಗೈ ಸ್ಪೀಡ್ ಬೌಲರ್ ಆಗಿರುವ ಅರ್ಷದೀಪ್ ಸಿಂಗ್ ಈ ಪಿಚ್ನಲ್ಲಿ ಮ್ಯಾಜಿಕ್ ಮಾಡುವುದು ಖಚಿತ. ಇಲ್ಲಿ ವಿಶೇಷವಾಗಿ ಕೊನೆಯ ಓವರ್ ಗಳಲ್ಲಿ ಅಗತ್ಯ ಎಂದನಿಸಿದರೆ ಮೀಸಲು ಆಟಗಾರ ಆಗಿರುವ ಮೊಹಮ್ಮದ್ ಶಮಿ ಅವರ ಸೇವೆಯನ್ನು ತಂಡ ಇಲ್ಲಿ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ರಾಬಿನ್ ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ.