SIIMA ಅವಾರ್ಡ್ಸ್ ನಲ್ಲಿ ವೇದಿಕೆಯಿಂದ ಇಳಿಯುವಾಗ ಕಣ್ಣೀರಿಟ್ಟ ದರ್ಶನ್. ಶಿವಣ್ಣ ನನ್ನು ತಬ್ಬಿಕೊಂಡು ದರ್ಶನ್ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಸೈಮಾ ಅವಾರ್ಡ್ಸ್ 10ನೇ ವರ್ಷದ ಸಂಭ್ರಮಾಚರಣೆ ಹಾಗೂ ಅವಾರ್ಡ್ ಫಂಕ್ಷನ್ ನಮ್ಮ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ.
ನಮ್ಮ ಕನ್ನಡ ಚಿತ್ರರಂಗದ ತಂತ್ರಜ್ಞರು ನಟರು ಸೇರಿದಂತೆ ಪರಭಾಷಾ ತಂತ್ರಜ್ಞರು ಹಾಗೂ ನಟರು ಕೂಡ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಸೈಮ ಅವಾರ್ಡ್ಸ್ ನಲ್ಲಿ ತಮ್ಮ ಅತ್ಯುತ್ತಮ ಕೆಲಸಗಳಿಗಾಗಿ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಅಪ್ಪು ಅವರನ್ನು ನೆನಪಿಸಿಕೊಳ್ಳುವಂತಹ ವಿಡಿಯೋವನ್ನು ಕೂಡ ಪ್ರಸಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಪ್ಪು ಅವರನ್ನು ನೆನಪಿಸಿಕೊಂಡು ಅವರ ನೆಚ್ಚಿನ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಕೂಡ ಶಿವಣ್ಣ ಹಾಡಿ ಭಾವುಕರಾಗಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಭೆಯಲ್ಲಿ ನೆರೆದಿದ್ದ ಡಿ ಬಾಸ್ ಕೂಡ ಎಮೋಷನಲ್ ಆಗಿದ್ದಾರೆ. ಯಾವತ್ತು ಅವಾರ್ಡ್ ಕಾರ್ಯಕ್ರಮಗಳಿಗೆ ಹೋಗದಿದ್ದ ಡಿ ಬಾಸ್ ರವರು ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳಲು ಮಾಡಿದ್ದ ಈ ಕಾರ್ಯಕ್ರಮಕ್ಕೆ ಅವರ ಗೌರವಾರ್ಥವಾಗಿ ಹೋಗಿದ್ದರು.

ಈ ಸಂದರ್ಭದಲ್ಲಿ ಭಾವುಕರಾಗಿ ಶಿವಣ್ಣ ವೇದಿಕೆ ಕೆಳಗೆ ಬಂದಾಗ ಡಿ ಬಾಸ್ ರವರು ಶಿವಣ್ಣ ಅವರನ್ನು ಆಲಂಗಿಸಿಕೊಂಡು ಸಮಾಧಾನ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಡಿ ಬಾಸ್ ಹಾಗೂ ಅಪ್ಪು ಯಾವ ರೀತಿಯ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು ಎಂಬುದನ್ನು ಕೂಡ ನಾವು ನೆನಪಿಸಿಕೊಳ್ಳಬಹುದಾಗಿದೆ.