ವಿಶ್ವಕಪ್ ನಲ್ಲಿ ರಾಹುಲ್ ಬೇಡ, ಅವರ ಬದಲು ಈತನನ್ನು ಕಣಕ್ಕೆ ಇಳಿಸಿ ರೋಹನ್ ಗವಾಸ್ಕರ್. ಯಾರು ಆರಂಭಿಕರಾಗಬೇಕಂತೆ ಗೊತ್ತೆ??

14

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಸಿಸಿಐ ನಿನ್ನೆಯಷ್ಟೇ ದೀರ್ಘಕಾಲ ಮೀಟಿಂಗ್ ನಡೆಸಿ ಕೊನೆಗೂ ಇದೇ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿರುವ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರೆಲ್ಲಾ ಆಡಬೇಕು ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದೆ. ರೋಹಿತ್ ಶರ್ಮಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರೆ, ಉಪನಾಯಕನಾಗಿ ಕೆಎಲ್ ರಾಹುಲ್ ರವರು ಆಯ್ಕೆಯಾಗಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್ ಮಾಜಿ ಆಟಗಾರ ಆಗಿರುವ ಸುನಿಲ್ ಗಾವಾಸ್ಕರ್ ಪುತ್ರ ರೋಹನ್ ಗಾವಾಸ್ಕಾರ್ ಅವರು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ರಾಹುಲ್ ಅವರ ಬದಲಿಗೆ ಆರಂಭಿಕ ಆಟಗಾರನಾಗಿ ಈ ಆಟಗಾರ ಇನ್ನಿಂಗ್ಸ್ ಆರಂಭಿಸಬೇಕು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಹೌದು ರೋಹನ್ ಗವಾಸ್ಕರ್ ಅವರ ಅಭಿಪ್ರಾಯದ ಪ್ರಕಾರ ಈ ಬಾರಿಯ ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ಉತ್ತಮ ಲಯದಲ್ಲಿದ್ದಾರೆ ಅದರಲ್ಲೂ ವಿಶೇಷವಾಗಿ ಅವರ ಸೆಂಚುರಿಯನ್ನುವುದು ತಂಡದ ಆರಂಭಿಕ ಆಟಗಾರನಾಗಿ ಆಡಿದ ನಂತರವೇ ಬಂದಿರುವುದು ವಿಶೇಷವಾಗಿದೆ. ವಿರಾಟ್ ಕೊಹ್ಲಿ ಅವರು ತಂಡದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಆಡಿದಾಗಲೆಲ್ಲ ಅವರ ಬ್ಯಾಟಿಂಗ್ ಸರಾಸರಿ 55ರ ಮೇಲೆ ಇದೆ ಹಾಗೂ ಸ್ಟ್ರೈಕ್ ರೇಟ್ ಕೂಡ 160 ರ ಮೇಲೆ ಇದೆ.

ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅವರ ಅನುಭವ ಹಾಗೂ ಓಪನಿಂಗ್ ಬ್ಯಾಟಿಂಗ್ ಆಡಿದರೆ ಅವರಿಗೆ ಹೆಚ್ಚಿನ ರನ್ಗಳನ್ನು ಬಾರಿಸಲು ಅವಕಾಶ ಸಿಗುತ್ತದೆ ಹೀಗಾಗಿ ಇದು ತಂಡದ ಹಿತ ದೃಷ್ಟಿಯ ದೃಷ್ಟಿಕೋನದಲ್ಲಿ ಕೂಡ ಅತ್ಯುತ್ತಮವಾಗಿದೆ ಎಂಬುದಾಗಿ ರೋಹನ್ ಗವಾಸ್ಕರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ರಾಹುಲ್ ಅವರ ಬದಲಿಗೆ ಇನ್ನಿಂಗ್ಸ್ ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡಿದರೆ ತಂಡದ ಬ್ಯಾಟಿಂಗ್ ಕ್ರಮಾಂಕ ಸಂತುಲನದಲ್ಲಿ ಇರುತ್ತದೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ರಾಹುಲ್ ಅವರು ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕು ಎಂಬುದಾಗಿ ರೋಹನ್ ಗವಾಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.