ತನ್ನ ಮೇಲೆ ಕೋಪ ಮಾಡಿಕೊಂಡಿದ್ದ ಶಿಕ್ಷಕಿಯನ್ನು ಮನವೊಲಿಸಲು, ಈ ಪುಟ್ಟ ಮಾಡಿದ ಕೆಲಸಗಳೇನು ಗೊತ್ತೇ?? ವೈರಲ್ ಆದ ವಿಡಿಯೋ ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಒಂದು ಮಗುವಿನ ಬಾಲ್ಯದಿಂದಲೇ ತಂದೆ ತಾಯಿಯರಿಗಿಂತ ಹೆಚ್ಚಾಗಿ ಆತ ಹೋಗುವ ಶಾಲೆಯ ಶಿಕ್ಷಕರ ಜೊತೆಗೆ ಹೆಚ್ಚಿನ ಬಾಂಧವ್ಯವನ್ನು ಆತ ಬೆಳೆಸಿಕೊಳ್ಳುತ್ತಾನೆ. ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಅತ್ಯಂತ ಪ್ರೀತಿಯಲ್ಲಿ ಇರುತ್ತಾರೆ ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಸ್ಟ್ರಿಕ್ಟ್ ಆಗಿರುತ್ತಾರೆ.
ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿ ವಿಶೇಷವಾಗಿ ಟ್ವಿಟರ್ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಈಗ ಎಲ್ಲರನ್ನೂ ಕೂಡ ತಮ್ಮ ಬಾಲ್ಯದ ಶಿಕ್ಷಕರ ಜೊತೆಗಿನ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಈ ವಿಡಿಯೋದಲ್ಲಿ ಹುಡುಗನ ಕ್ಯೂಟ್ನೆಸ್ ಎನ್ನುವುದು ಪ್ರತಿಯೊಬ್ಬ ವೀಕ್ಷಕನ ಮನವನ್ನು ಕದ್ದಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾವು ಕೂಡ ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ನಮ್ಮ ಶಿಕ್ಷಕ ಶಿಕ್ಷಕಿಯರ ಜೊತೆಗೆ ಕೆಲವೊಮ್ಮೆ ತಪ್ಪು ಮಾಡಿ ಅವರಿಂದ ಪನಿಷ್ಮೆಂಟ್ ಅನ್ನು ಕೂಡ ಪಡೆದುಕೊಂಡಿದ್ದೇವೆ. ಅದೇ ರೀತಿ ಇಲ್ಲಿ ಒಬ್ಬ ಬಾಲಕ ತನ್ನ ತರಗತಿಯ ಶಿಕ್ಷಕಿಯ ಬಳಿ ಏನು ತಪ್ಪು ಮಾಡಿದ್ದಾನೆ ಅದಕ್ಕಾಗಿಯೇ ಆತನ ಜೊತೆಗೆ ಶಿಕ್ಷಕಿ ಕೋಪಿಸಿಕೊಂಡಂತೆ ನಾಟಕ ಮಾಡುತ್ತಿದ್ದಳು.

ಇದರಿಂದ ಬೇಸರಗೊಂಡ ಆ ಬಾಲಕ ಇನ್ನೊಮ್ಮೆ ನಾನು ಆ ರೀತಿಯ ತಪ್ಪನ್ನು ಮಾಡುವುದಿಲ್ಲ ನನ್ನನ್ನು ಕ್ಷಮಿಸಿ ಎಂಬುದಾಗಿ ಕ್ಯೂಟ್ ಆಗಿ ಕೇಳುತ್ತಿರುತ್ತಾನೆ. ಹಲವಾರು ಬಾರಿ ಶಿಕ್ಷಕಿಗೆ ಕ್ಷಮಿಸಿ ಎಂದು ಕೇಳಿ ಕೆನ್ನೆಗೆ ಚುಂಬಿಸಿದ ನಂತರ ಆ ಶಿಕ್ಷಕಿ ಆತನನ್ನು ಕ್ಷಮಿಸುತ್ತಾಳೆ. ಈ ವಿಡಿಯೋದಲ್ಲಿ ಇಬ್ಬರೂ ಕೂಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ವ್ಯಕ್ತಿ ನಾವು ಬಾಲ್ಯದಲ್ಲಿ ಇದ್ದಾಗ ಈ ರೀತಿಯ ಶಿಕ್ಷಕಿ ಯಾಕೆ ನಮ್ಮ ತರಗತಿಯಲ್ಲಿ ಇರಲಿಲ್ಲ ಎಂಬುದಾಗಿ ಹಾಸ್ಯಸ್ಪದವಾಗಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನಿಮ್ಮ ಅಭಿಪ್ರಾಯವನ್ನು ಕೂಡ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.
ऐसा स्कूल मेरे बचपन में क्यों नहीं था 😏😌 pic.twitter.com/uHkAhq0tNN
— ज़िन्दगी गुलज़ार है ! (@Gulzar_sahab) September 12, 2022