ಸೈಮಾ ಕಾರ್ಯಕ್ರಮದಲ್ಲಿ ಅಪ್ಪು ವೀಡಿಯೋ ಬಂದಾಗ ದರ್ಶನ್ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ ? ಕಣ್ಣೀರಿಟ್ಟ ಶಿವಣ್ಣ

58

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಹತ್ತನೇ ವರ್ಷದ ಸೈಮಾ ಅವಾರ್ಡ್ಸ್ ಅನ್ನು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸುವ ನಿಮಿತ್ತವಾಗಿ ನಡೆದಿದೆ ಎಂದರು ತಪ್ಪಾಗಲಾರದು.

ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಲವಾಗಿ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ಸೈಮಾ ಅವಾರ್ಡ್ಸ್ ಅನ್ನು ಅಟೆಂಡ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸುವಂತಹ ವಿಡಿಯೋವನ್ನು ಕೂಡ ಪ್ರಸಾರ ಮಾಡಲಾಗಿದೆ. ಇರೆಕ್ಷಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಣ್ಣ ಆಗಿರುವ ಶಿವಣ್ಣ ಬಾನ ದಾರಿಯಲ್ಲಿ ಹಾಡನ್ನು ಹಾಡುತ್ತ ಭಾವುಕರಾಗಿ ಕಣ್ಣೀರು ಕೂಡ ಹಾಕಿದ್ದಾರೆ. ಅದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಯಶ್ ಶಿವಣ್ಣ ಅವರನ್ನು ಸಮಾಧಾನ ಪಡಿಸುತ್ತಾರೆ. ಈ ಸಂದರ್ಭದಲ್ಲಿ ಡಿ ಬಾಸ್ ಸೇರಿದಂತೆ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಕೂಡ ಒಂದು ಕ್ಷಣ ಕಂಬನಿಯನ್ನು ಮಿಡಿಯುತ್ತಾರೆ‌.

ಶಿವಣ್ಣ ವೇದಿಕೆಯಿಂದ ಕೆಳಗಿಳಿದು ಬಂದ ತಕ್ಷಣ ಶಿವಣ್ಣ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಬ್ಬಿ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಾರೆ. ಈ ಮೂಲಕ ಅಪ್ಪು ಹಾಗು ಅಪ್ಪು ಅವರ ಕುಟುಂಬವನ್ನು ಡಿ ಬಾಸ್ ರವರು ಎಷ್ಟು ಇಷ್ಟಪಡುತ್ತಿದ್ದಾರೆ ಎಂಬುದು ಈ ಮೂಲಕ ತಿಳಿದು ಬರುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಯಾವತ್ತು ಹೋಗದ ಡಿ ಬಾಸ್ ಮೊದಲ ಬಾರಿಗೆ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದರೆ ಅದು ಅಪ್ಪು ಅವರ ಮೇಲಿನ ಗೌರವ ಎಂದು ಹೇಳಬಹುದಾಗಿದೆ.