ಶತಕ ಗಳಿಸಿದರು ಕೊಹ್ಲಿ ಗೆ ತಪ್ಪಿಲ್ಲ ಕಾಟ: ಟಿ 20 ವಿಶ್ವಕಪ್ ಕೊಹ್ಲಿ ರವರಿಗೆ ಸುಲಭವಾಗಿಲ್ಲ ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗುತ್ತಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಸಾಕಷ್ಟು ಕಳಪೆ ಫಾರ್ಮ್ ನಲ್ಲಿ ಇದ್ದರು ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅವರು ಖಂಡಿತವಾಗಿ ತಂಡದಿಂದ ಹೊರ ಬೀಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ನೀಡಿರುವ ಸೂಪರ್ ಡೂಪರ್ ಪರ್ಫಾರ್ಮೆನ್ಸ್ ನೋಡಿದ ಮೇಲೆ ಯಾರೇ ಬಂದರೂ ಕೂಡ ಟಿ20 ವಿಶ್ವಕಪ್ ನಲ್ಲಿ ಅವರ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಎಲ್ಲರೂ ಕೂಡ ಕಾನ್ಫಿಡೆಂಟ್ ಆಗಿದ್ದಾರೆ.
ಈ ಬಾರಿ ಆ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆಸ್ಟ್ರೇಲಿಯ ನೆಲದಲ್ಲಿ ನಡೆಯಲಿದ್ದು ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಇದೇ ಸಪ್ಟೆಂಬರ್ 16ರಂದು ಭಾರತೀಯ ಕ್ರಿಕೆಟ್ ತಂಡವನ್ನು ಅಧಿಕೃತವಾಗಿ ಟಿ 20 ವಿಶ್ವಕಪ್ ಗಾಗಿ ಘೋಷಿಸಲಿದೆ. ಈಗಾಗಲೇ ಓಪನರ್ ಆಗಿ ಏಷ್ಯಾ ಕಪ್ ನಲ್ಲಿ ಶತಕವನ್ನು ಬಾರಿಸಿರುವ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಕೂಡ ಓಪನ್ ಆಗಿರೋಹಿತ್ ಶರ್ಮ ಅವರ ಜೊತೆಗೆ ಇನ್ನಿಂಗ್ಸ್ ಆರಂಭಿಸಬಹುದು ಇಲ್ಲವಾದರೆ ಅವರ ಮಾಮೂಲಿ ಸ್ಥಾನ ಆಗಿರುವ ಮೂರನೇ ಕ್ರಮಾಂಕದಲ್ಲಿ ಕೂಡ ಬ್ಯಾಟಿಂಗ್ ಮಾಡಬಹುದು. ಆದರೆ ಇದು ಅಂದುಕೊಂಡಂತೆ ಸುಲಭ ಅಂತೂ ಆಗಿಲ್ಲ ಯಾಕೆಂದರೆ ಬ್ಯಾಟಿಂಗ್ ಕ್ರಮ ಅಂಕದ ಕುರಿತಂತೆ ಇನ್ನೂ ಕೂಡ ತಂಡದಲ್ಲಿ ಏಷ್ಯಾ ಕಪ್ ನಂತರ ಗೊಂದಲ ಎನ್ನುವುದು ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ತಂಡದಲ್ಲಿ ಈಗಾಗಲೇ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕೆ ಎಲ್ ರಾಹುಲ್, ಅವರಂತಹ ಹಲವಾರು ಆಟಗಾರರ ಆಯ್ಕೆ ಇದ್ದು ಕೊಹ್ಲಿ ಯಾವ ಕ್ರಮಾಂಕದಲ್ಲಿ ಆಡುವುದು ಎನ್ನುವುದು ಇನ್ನೂ ಕೂಡ ಅನಿಶ್ಚಿತತೆಯಿಂದ ಕೂಡಿದೆ.

ಸಾಮಾನ್ಯವಾಗಿ ಕೆಲ ಕ್ರಮ ಅಂಕದಲ್ಲಿ ಅಂದರೆ ಮೂರನೇ ಕ್ರಮಾಂಕದಲ್ಲಿ ಆಡಿದಾಗ ಬ್ಯಾಟಿಂಗ್ ಅನ್ನು ಆಧರಿಸುವ ವಿರಾಟ್ ಕೊಹ್ಲಿ ಅವರ ಸುತ್ತ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ನಡೆಯುತ್ತದೆ ಎಂಬುದು ಈಗಾಗಲೇ ನಾವು ನೋಡಿರುವ ವಿಚಾರ. ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಯಾರು ಯಾವ ಸ್ಥಾನದಲ್ಲಿ ಅದರಲ್ಲಿಯೂ ವಿಶೇಷವಾಗಿ ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿ ಆಡಬೇಕಾಗುತ್ತದೆ ಎನ್ನುವುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ತಂಡ ಬಯಸಿದಂತೆ ಆರಂಭಿಕ ಆಟಗಾರರ ಅನುಪಸ್ಥಿತಿಯಲ್ಲಿ ಅಥವಾ ಅಲಭ್ಯತೆಯಲ್ಲಿ ಓಪನಿಂಗ್ ಕೂಡ ಆಡಬೇಕಾಗುತ್ತದೆ ಹಾಗೂ ಪರಿಸ್ಥಿತಿ ಎದುರಾಗಬಹುದು.