ಅಪ್ಪು ನಿಧನರಾದಾಗ ರಾಘಣ್ಣ ತೆಗೆದುಕೊಂಡದ್ದು ಅದೆಂತಹ ನಿರ್ಧಾರ ಗೊತ್ತೇ?? ಮನೆಯವರಿಗೆ ಆರ್ಡರ್ ಮಾಡಿ ಹೇಳಿದ್ದೇನು ಗೊತ್ತೆ??

20

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ದಿನದಂದು 25 ಲಕ್ಷಕ್ಕೂ ಅಧಿಕ ಜನರು ಅವರನ್ನು ಕೊನೆಯ ಬಾರಿಗೆ ಗಂಡು ತುಂಬಿಕೊಂಡಿದ್ದು ಇಂದಿಗೂ ಕೂಡ ಆ ನೆನಪು ಹಚ್ಚಹಸಿರಾಗಿದೆ. ಅವರು ದೈಹಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರೂ ಕೂಡ ಅದನ್ನು ಮನಸ್ಸು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅಂದರೆ ಅಪ್ಪು ಅವರ ಅಣ್ಣ ರಾಘಣ್ಣ ಅಪ್ಪು ಎಲ್ಲರನ್ನೂ ಬಿಟ್ಟು ಅಗಲಿ ಹೋದ ಸಂದರ್ಭದಲ್ಲಿ ಮನೆಯವರಿಗೆಲ್ಲರಿಗೂ ಕೂಡ ಒಂದು ಆರ್ಡರ್ ಅನ್ನು ಮಾಡಿದ್ದರು. ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಸಂದರ್ಶಕರು ಕೇಳಿದ ಪ್ರಶ್ನೆಗೆ ರಾಘಣ್ಣ ಇದರ ಕುರಿತಂತೆ ಪ್ರತಿಕ್ರಿಸುತ್ತಾರೆ. ಈ ಹಿಂದೆ ಅಪ್ಪಾಜಿ ಅಂದರೆ ಡಾಕ್ಟರ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದಾಗ ಮನೆಯವರ ದುಃಖ ನೋಡಿ ಇಡಿ ರಾಜ್ಯದ ಜನತೆ ಯಾವ ರೀತಿ ರಿಯಾಕ್ಟ್ ಮಾಡಿದ್ದರು ಎಂಬುದು ಈಗಾಗಲೇ ನಮಗೆ ತಿಳಿದಿತ್ತು. ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.

ಇದಕ್ಕಾಗಿ ಅಭಿಮಾನಿಗಳ ಎದುರಿಗೆ ಯಾರು ಕೂಡ ಅಳಬಾರದು ಎಂಬುದಾಗಿ ರಾಘಣ್ಣ ಮೊದಲೇ ಎಲ್ಲರಿಗೂ ತಿಳಿಸಿದ್ದರು. ಅಪ್ಪು ಅವರನ್ನು ನಗುನಗುತ್ತಲೇ ಅಭಿಮಾನಿಗಳ ಜೊತೆಗೆ ಕಳುಹಿಸಿ ಕೊಡೋಣ ಎಂಬುದಾಗಿ ನಿರ್ಧರಿಸಿದ್ದೆವು ಎಂಬುದಾಗಿ ರಾಘಣ್ಣ ಹೇಳಿದ್ದಾರೆ. ಆವತ್ತು ಸರಿಯಾಗಿ ಗಮನಿಸಿದರೆ ದೊಡ್ಡಮನೆ ಕುಟುಂಬ ಮನಸ್ಸಿನಲ್ಲಿ ಬೆಟ್ಟದಂತ ದುಃಖ ಇದ್ದರೂ ಕೂಡ ಎಲ್ಲೂ ಕೂಡ ಅಳುವುದಕ್ಕೆ ಹೋಗಿರಲಿಲ್ಲ. ದೊಡ್ಮನೆ ಕುಟುಂಬದ ಈ ತ್ಯಾಗ ಈಗ ಮತ್ತೆ ಬೆಳಕಿಗೆ ಬಂದಿದ್ದು ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಘಣ್ಣ ತಾವು 10 ವರ್ಷದ ವಯಸ್ಸಿನಲ್ಲಿ ಇರಬೇಕಾದರೆ ಅಪ್ಪು ಅವರನ್ನು ತೊಟ್ಟೌಲಿನಲ್ಲಿ ಮೊದಲ ಬಾರಿ ನೋಡಿದ್ದನ್ನು ಹಾಗೂ ಕೊನೆಯ ಬಾರಿಗೆ ಅವರನ್ನು ಆಸ್ಪತ್ರೆಯಲ್ಲಿ ನೋಡಿದ್ದನ್ನು ಕೂಡ ನೆನಪಿಸಿಕೊಂಡು ಕಣ್ಣೀರು ಹಾಕುತ್ತಾರೆ.