ಚಿಕ್ಕ ಹುಡುಗಿ ಎಂಬುದನ್ನು ನೋಡದೆ ಮದುವೆಯಾದ 52 ವರ್ಷದ ವ್ಯಕ್ತಿ. ಮೂರೇ ದಿನಕ್ಕೆ ಬಯಲಾಯ್ತು ಅಸಲಿ ಸತ್ಯ. ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??

23

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ 45 ವರ್ಷದ ವ್ಯಕ್ತಿ ಒಬ್ಬ 14 ವರ್ಷದ ಹುಡುಗಿಯನ್ನು ಮದುವೆಯಾಗಿ ಬಂಧನಕ್ಕೆ ಒಳಗಾಗಿರುವ ಪ್ರಕರಣ ಹೊರ ಬರುತ್ತಿದ್ದಂತೆ ಮತ್ತೊಬ್ಬ 52 ವರ್ಷ ವಯಸ್ಸಾದ ವ್ಯಕ್ತಿಯು ಕೂಡ ಇದೇ ರೀತಿಯ ಎಡವಟ್ಟನ್ನು ಮಾಡಿಕೊಂಡು ಈಗ ತನ್ನನ್ನು ತಾನು ಮುಗಿಸಿಕೊಳ್ಳಲು ಪ್ರಯತ್ನಿಸಿದ್ದು ಕೂಡ ಬೆಳಕಿಗೆ ಬಂದಿದೆ.

52 ವರ್ಷದ ಅನಿಲ್ ಎಂಬಾತ ಈ ಪ್ರಕರಣದ ಕೇಂದ್ರ ಬಿಂದು ಆಗಿದ್ದಾನೆ. ಈತ ಅಪ್ರಾಪ್ತ ವಯಸ್ಸಿನ ಹುಡುಗಿ ಒಬ್ಬಳನ್ನು ಮದುವೆಯಾಗಿದ್ದಾನೆ. ಆದರೆ ಮದುವೆಯಾದ ಮೂರನೇ ತಿಂಗಳಿಗೆ ಆಕೆ ಅಪ್ರಾಪ್ತ ವಯಸ್ಕಳು ಎಂಬುದಾಗಿ ಆತನಿಗೆ ತಿಳಿದು ಬಂದಿದ್ದು ಇದರಿಂದಾಗಿ ಆತ ಗಲಿಬಿಲಿಗೊಂಡಿದ್ದಾನೆ. ಕೆಲವೊಮ್ಮೆ ತಿಳಿದು ಅಪರಾಧವಾಗುತ್ತದೆ ಇನ್ನು ಕೆಲವೊಮ್ಮೆ ತಿಳಿಯದೆ ಅಪರಾಧವಾಗುತ್ತದೆ ಇಲ್ಲಿ ಅನಿಲ್ ವಿಚಾರದಲ್ಲಿ ಕೂಡ ತಿಳಿಯದೆ ನಡೆದಂತಿದೆ ಯಾಕೆಂದರೆ ಈ ವಿಚಾರವನ್ನು ತಿಳಿದ ನಂತರ ಆತ ಮಾಡಿಕೊಳ್ಳಲು ಯತ್ನಿಸಿದ ಕಾರ್ಯ ಖಂಡಿತವಾಗಿ ಇದನ್ನು ಮತ್ತೊಮ್ಮೆ ಪ್ರತಿಫಲಿಸುತ್ತದೆ.

ಈ ವಿಷಯ ಹೊರ ಹೋಗುತ್ತಿದ್ದಂತೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯವರು ಅನಿಲ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನನ್ನನ್ನು ಜೈಲಿಗೆ ಹಾಕುತ್ತಾರೆ ಎಂಬ ಆತಂಕದಿಂದ ಈ ನಡುವಲ್ಲಿಯೇ 52 ವರ್ಷದ ಅನಿಲ್ ವಿಷ ಸೇವಿಸಿ ತನ್ನ ಜೀವನವನ್ನು ಮುಗಿಸಿಕೊಳ್ಳಲು ಕೂಡ ಪ್ರಯತ್ನಪಟ್ಟಿದ್ದಾನೆ. ಇದೇ ಜುಲೈ 19ರಂದು ಇವರ ಮದುವೆ ನಡೆದಿದ್ದು ಕೇವಲ ಅನಿಲ್ ಮಾತ್ರವಲ್ಲದೆ ಈ ಮದುವೆಯಲ್ಲಿ ಭಾಗವಹಿಸಿರುವ 60 ಜನರ ಮೇಲು ಕೂಡ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.