ಕನ್ನಡದ ಟಾಪ್ ನಟ ಡಿ ಬಾಸ್ ದರ್ಶನ್ ರವರ ಬಗ್ಗೆ ಹೇಳಿ ಎಂದಿದ್ದಕ್ಕೆ ಮಲಯಾಳಿ ಸುಂದರಿ, ಗಜ ನಾಯಕಿ ಹೇಳಿದ್ದೆ ಬೇರೆ. ಏನು ಗೊತ್ತೇ??

12

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಪರಭಾಷೆಯಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿಮಣಿಯರ ಸಂಖ್ಯೆ ಸಾಕಷ್ಟು ಗಣನೀಯವಾಗಿ ಹೆಚ್ಚಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡದ ಹೊಸ ಹೊಸ ನಟಿಯರೇ ಸಿನಿಮಾಗಳಿಗೆ ನಾಯಕಿಯರಾಗಿ ಆಯ್ಕೆಯಾಗುತ್ತಿದ್ದಾರೆ. ಆ ಕಾಲದಲ್ಲಿ ಪರಭಾಷೆಯಿಂದ ಬಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ನಟಿಸಿ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದುಕೊಂಡಿರುವ ಮಲಯಾಳಿ ಮೂಲದ ನಟಿ ನವ್ಯನಾಯರ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಮುಗ್ಧ ಸೌಂದರ್ಯ ಹಾಗೂ ಅಭೂತಪೂರ್ವ ನಟನೆಯ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ನಟಿ ನವ್ಯನಾಯರ್. ಮಲಯಾಳಂ ಮೂಲದವರಾಗಿರುವ ನಟಿ ನವ್ಯ ನಾಯರ್ ಅವರು ಕನ್ನಡ ಸೇರಿದಂತೆ ತಮಿಳು ತೆಲುಗು ಭಾಷೆಗಳಲ್ಲಿ ಕೂಡ ಈಗಾಗಲೇ ನಟಿಸಿದ್ದಾರೆ. ಇನ್ನು ಇವರು ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಜ ಸಿನಿಮಾದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯ ರಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರ ಸಿನಿಮಾಗಳಲ್ಲಿ ಕೂಡ ಇವರು ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಇನ್ನು ಇತ್ತೀಚಿಗೆ ದರ್ಶನ್ ರವರ ಕುರಿತಂತೆ ನೀಡಿರುವ ಹೇಳಿಕೆಯ ಕಾರಣದಿಂದಾಗಿ ಕೂಡ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಇತ್ತೀಚಿಗಷ್ಟೇ ನವ್ಯ ನಾಯರ್ ಅವರು ತಾವು ಮಲಯಾಳಂನಲ್ಲಿ ಬರೆದಿರುವ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕನ್ನಡದಲ್ಲಿ ನಾನು ನಟಿಸಿರುವ ನಾಯಕರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ನೆಚ್ಚಿನ ನಟ ಎಂಬುದಾಗಿ ಹೇಳಿಕೊಂಡಿದ್ದಾರೆ. ಅವರೊಂದಿಗೆ ನಟಿಸಿರುವ ಗಜ, ಶೌರ್ಯ ಹಾಗೂ ಬಾಸ್ ಸಿನಿಮಾಗಳು ನನ್ನ ನೆಚ್ಚಿನ ಸಿನಿಮಾಗಳು ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ನಟಿ ನವ್ಯ ನಾಯರ್ ಅವರ ನಟನೆಯ ಬಗ್ಗೆ ಹಾಗೂ ಅವರ ನಟನೆಯ ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ಕೂಡ ನೀವು ಅಭಿವ್ಯಕ್ತ ಪಡಿಸಬಹುದಾಗಿದೆ.