ಕೊನೆಗೂ ಸಿಕ್ತು ಉತ್ತರ: ದಿಶಾ ಪತಾನಿ ರವರು ಧರಿಸಿ ಬಂದ ಆ ಬ್ಯಾಗ್ ನ ಬೆಲೆ ಎಷ್ಟು ಗೊತ್ತೆ?? ವರ್ಷದ ಸಂಬಳಕ್ಕಿಂತ ಹೆಚ್ಚು. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗ ಮೊದಲಿನಿಂದಲೂ ಕೂಡ ಸುಂದರ ನಟಿಮಣಿಯರ ವಿಚಾರವಾಗಿ ಸಾಕಷ್ಟು ಸುದ್ದಿ ಆಗುತ್ತಲೇ ಬಂದಿದೆ. ಮೊದಲಿನ ಕಾಲದಿಂದಲೂ ಕೂಡ ಬಾಲಿವುಡ್ ನಟಿಮಣಿಯರು ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದು ನಟಿಸುತ್ತಿದ್ದರು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ ಆಗಿರುವ ದಿಶಾ ಪಟಾನಿ ಅವರ ಕುರಿತಂತೆ.
ಇವರು ತೆಲುಗು ಚಿತ್ರರಂಗದಲ್ಲಿ ನಟಿಸಿ ನಂತರದ ದಿನಗಳಲ್ಲಿ ಸುಶಾಂತ್ ಸಿಂಗ್ ರಾಜಪೂತ್ ನಟನೆಯ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಸಿನಿಮಾದಲ್ಲಿ ಅವರ ಮೊದಲ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಗುರುತನ್ನು ಸ್ಥಾಪಿಸಿಕೊಳ್ಳುತ್ತಾರೆ. ಇಂದು ಬಾಲಿವುಡ್ ಚಿತ್ರರಂಗದಲ್ಲಿ ಗ್ಲಾಮರಸ್ ನಟಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಆಗಾಗ ಅವರ ಹಾಗೂ ಬಾಲಿವುಡ್ ಚಿತ್ರರಂಗದ ಯುವ ನಟ ಆಗಿರುವ ಟೈಗರ್ ಶ್ರಾಫ್ ರವರ ನಡುವಿನ ಲವ್ ಸ್ಟೋರಿಗಳು ಆಗಾಗ ಕೇಳಿ ಬರುತ್ತದೆ ಆದರೆ ಇಬ್ಬರೂ ಕೂಡ ತಾವು ಇಬ್ಬರು ಒಳ್ಳೆಯ ಸ್ನೇಹಿತರು ಮಾತ್ರ ಎಂಬುದಾಗಿ ಈ ಗಾಳಿ ಸುದ್ದಿಗಳನ್ನು ತಳ್ಳುತ್ತಲೇ ಬಂದಿದ್ದಾರೆ.

ಸದ್ಯಕ್ಕೆ ಈಗ ದಿಶಾ ಪಟಾನಿ ಅವರ ಬಗ್ಗೆ ಸದ್ದು ಆಗುತ್ತಿರುವ ವಿಚಾರವೇನೆಂದರೆ ಇತ್ತೀಚಿಗಷ್ಟೇ ಅವರು ಧರಿಸಿ ಬಂದಿರುವ ಹ್ಯಾಂಡ್ ಬ್ಯಾಗ್ ಬೆಲೆ. ಇದರ ಬೆಲೆ ನಮ್ಮ ನಿಮ್ಮೆಲ್ಲರ ವರ್ಷದ ಸಂಬಳ ಗಿಂತಲೂ ಅಧಿಕ ಎಂಬುದು ಮತ್ತೊಂದು ಆಶ್ಚರ್ಯಕರ ವಿಚಾರ. ಹೌದು ದಿಶಾ ಪಟಾನಿ ಅವರ ಈ ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗಿನ ಬೆಲೆ ಬರೋಬ್ಬರಿ 5 ಲಕ್ಷ. ಕೇವಲ ಸಿನಿಮಾದ ಮೂಲಕ ಮಾತ್ರವಲ್ಲದೆ ಜಾಹೀರಾತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರಮೋಷನ್ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿ ಸಿನಿಮಾದಲ್ಲಿ ನಟಿಸುವ ಮೂಲಕ ಎಲ್ಲರ ಕ್ರಷ್ ಆಗಿ ಕೂಡ ಕಾಣಿಸಿಕೊಂಡಿದ್ದರು.