ಸೈಮಾ ಅವಾರ್ಡ್ಸ್ ನಲ್ಲಿ ಶುರುವಾಯಿತು ಡಿ ಬಾಸ್ ಹವಾ: ಕನ್ನಡದಲ್ಲಿ ದರ್ಶನ್ ಶುರುಮಾಡಿದ ಹವಾ ಹೇಗಿದೆ ಗೊತ್ತೇ??

10

ನಮಸ್ಕಾರ ಸ್ನೇಹಿತರೆ ಸದ್ಯಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಸೆರೆಮನಿ ಆಗಿರುವ ಸೈಮ ಅವಾರ್ಡ್ಸ್ ಸಪ್ಟೆಂಬರ್ 10 ರಿಂದ ಪ್ರಾರಂಭವಾಗಿದ್ದು ಇಂದು ಕೂಡ ಮುಂದುವರೆಯಲಿದೆ.ಸಾಮಾನ್ಯವಾಗಿ ನಿಮಗೆಲ್ಲಾ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅವಾರ್ಡ್ಸ್ ಗಳಲ್ಲಿ ಅಷ್ಟೊಂದು ನಂಬಿಕೆ ಇಡುವುದಿಲ್ಲ ಯಾಕೆಂದರೆ ಅವರಿಗೆ ಅಭಿಮಾನಿಗಳ ರಿವಾರ್ಡ್ಸ್ ಸದಾ ಕಾಲ ಸಿಗುತ್ತದೆ.

ಆದರೆ ಈ ಬಾರಿ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಸೈಮ ಅವಾರ್ಡ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಅತ್ಯಂತ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಕನ್ನಡ ಸಿನಿಮಾ ಆಗಿದೆ. ಹೌದು ಈ ಬಾರಿ ಸೈಮ ಅವಾರ್ಡ್ಸ್ ನ ಬರೋಬ್ಬರಿ 10 ವಿಭಾಗಗಳಲ್ಲಿ ರಾಬರ್ಟ್ ಸಿನಿಮಾ ನಾಮಿನೇಟ್ ಆಗಿದೆ. ಅದರಲ್ಲಿಯೂ ವಿಶೇಷವಾಗಿ ಸೈಮಾ ಅವಾರ್ಡ್ಸ್ ನಲ್ಲಿ ಈ ಬಾರಿ ಮೊದಲ ಅವಾರ್ಡ್ ಪಡೆದ ಕನ್ನಡ ಸಿನಿಮಾ ಆಗಿ ಗುರುತಿಸಿಕೊಂಡಿದೆ.

ಹೌದು ಮಿತ್ರರೇ ರಾಬರ್ಟ್ ಚಿತ್ರದ ಕ್ಯಾಮೆರಾ ಮ್ಯಾನ್ ಆಗಿರುವ ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಹಕ ಎನ್ನುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಪ್ರಶಸ್ತಿಯ ಬೇಟೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತಂಡ ಆರಂಭಿಸಿದ್ದು ಇದು ಮತ್ತೆ ಮುಂದುವರೆಯಲಿ ಎಂಬುದಾಗಿ ಹಾರೈಸೋಣ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್, ರಣವೀರ್ ಸಿಂಗ್ ಹಾಗೂ ಕಮಲ್ ಹಾಸನ್ ಮುಂತಾದವರು ಆಗಮಿಸಿದ್ದಾರೆ.