ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ: DNA ಟೆಸ್ಟ್ ಮಾಡಿಸಿದಾಗ ಎರಡು ಮಕ್ಕಳ ತಂದೆ ಒಬ್ಬರಲ್ಲ. ಅದೇಗೆ ಸಾಧ್ಯ ಗೊತ್ತೇ??

44

ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾಗಿ ಸದ್ದು ಮಾಡುತ್ತವೆ. ಅದೇ ರೀತಿ ಇಂದು ಒಂದು ನಂಬಲು ಸಾಧ್ಯವಾಗದಂತಹ ವಿಚಾರದ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ. ಬ್ರೆಜಿಲ್ ಮೂಲದ 19 ವರ್ಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅರೆ ಇದೇನಪ್ಪ ಇದಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ಮಗುವಿಗೆ ಜನ್ಮ ನೀಡಿದ್ದನ್ನು ನಾವು ಕೇಳಿದ್ದೇವೆ, ಇದರಲ್ಲೇನು ವಿಚಿತ್ರ ಎಂಬುದಾಗಿ ನೀವು ಕೇಳಬಹುದು.

ವಿಚಿತ್ರ ಇರುವುದು 19ನೇ ವರ್ಷದ ಯುವತಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎನ್ನುವುದಲ್ಲ. ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಆದರೆ ಆ ಎರಡು ಮಕ್ಕಳಿಗೂ ಕೂಡ ತಂದೆ ಮಾತ್ರ ಬೇರೆ ಬೇರೆ. ಮಿಲಿಯನ್ ನಲ್ಲಿ ಸಿಗುವಂತಹ ಒಂದು ಪ್ರಕರಣ ಇದಾಗಿದ್ದು ವೈದ್ಯರೇ ಇದನ್ನು ನೋಡಿ ಹೈರಾಣಾಗಿದ್ದಾರೆ. ಆ ಅವಳಿ ಮಕ್ಕಳ ತಂದೆ ಯಾರು ಎನ್ನುವ ಅನುಮಾನವಿತ್ತು ಹೀಗಾಗಿಯೇ ಡಿಎನ್ಎ ಪರೀಕ್ಷೆಯನ್ನು ನಡೆಸಲಾಗಿತ್ತು. ಮಕ್ಕಳು ಕೂಡ ಇಬ್ಬರೂ ಒಂದೇ ಹೋಲಿಕೆಯನ್ನು ಹೊಂದಿದ್ದರು ಆದರೆ ಇಬ್ಬರು ಮಕ್ಕಳಿಗೆ ತಂದೆಯರು ಮಾತ್ರ ಬೇರೆ ಬೇರೆ ಆಗಿದ್ದರು.

ನಂತರ ತಿಳಿದು ಬಂದಿದ್ದೇನೆಂದರೆ ಒಂದೇ ದಿವಸ ಆ ಹುಡುಗಿ ಇಬ್ಬರೂ ಯುವಕರ ಜೊತೆಗೆ ಮಿಲನವನ್ನು ಹೊಂದಿದ್ದಳು. ಇದು ಜಗತ್ತಿನಲ್ಲಿ ಮೊದಲ ಪ್ರಕರಣವೇನೆಲ್ಲ ಈಗಾಗಲೇ ಇದೇ ರೀತಿ 20 ಅಪರೂಪದ ಪ್ರಕರಣಗಳು ಜಗತ್ತಿನಲ್ಲಿ ದಾಖಲಾಗಿವೆ. ಡಿಎನ್ಎ ಪರೀಕ್ಷೆ ಮಾಡುವಾಗ ಮೊದಲಿಗೆ ಒಬ್ಬನನ್ನೇ ಅನುಮಾನ ಪಟ್ಟು ಆ ಹುಡುಗಿ ಕರೆಸಿದ್ದಳು. ನಂತರ ನೆನಪಾಗಿ ಮತ್ತೊಬ್ಬನನ್ನು ಕೂಡ ಕರೆಸಿದ್ದಾಳೆ ಆಗ ಪರೀಕ್ಷೆಯಲ್ಲಿ ಇಬ್ಬರೂ ಕೂಡ ತಂದೆಯರು ಎಂಬುದಾಗಿ ತಿಳಿದು ಬಂದಿದೆ. ಈಗ ಒಬ್ಬ ತಂದೆ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ. ಈ ವಿಚಿತ್ರ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಜೊತೆಗೆ ತಿಳಿಸಿ.