ಕೊನೆಗೂ ಬಯಲಾಯ್ತು ಅಸಲಿ ಕಾರಣ: ಟೀಮ್ ಇಂಡಿಯಾ ಏಷ್ಯಾ ಕಪ್ ನಲ್ಲಿ ಹೀನಾಯವಾಗಿ ಸೋಲಲು ಕಾರಣವೇನು ಗೊತ್ತೇ??

21

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಟೂರ್ನಮೆಂಟ್ ನ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ಎದುರು ದಯನೀಯವಾಗಿ ಸೋಲನ್ನು ಕಂಡಿದೆ. ಟಿ ಟ್ವೆಂಟಿ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸೋಲು ನಿಜಕ್ಕೂ ಕೂಡ ತಂಡದ ದೃತಿಗೆಡಿಸುವಂತಿದೆ.

ಹಾಗಿದ್ದರೆ ಹೀನಾಯ ಸೋಲಿನ ಹಿಂದಿನ ಕಾರಣಗಳನ್ನು ಒಂದೊಂದಾಗಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಮೊದಲಿಗೆ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಹಲವಾರು ಯೋಜನೆಗಳು ಇದಕ್ಕೂ ಮುನ್ನ ನಡೆದಿರುವ ವಿದೇಶಿ ಸರಣಿಗಳಲ್ಲಿ ಕಾರ್ಯನಿರ್ವಹಿಸಿದ್ದವು ಆದರೆ ಏಷ್ಯಾ ಕಪ್ ನಲ್ಲಿ ಮಾತ್ರ ಸಂಪೂರ್ಣವಾಗಿ ವಿಫಲವಾಗಿದೆ. ಅದರಲ್ಲೂ ವಿಶೇಷವಾಗಿ ಆರಂಭಿಕರ ಬದಲಾವಣೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆಟಗಾರರ ಬದಲಾವಣೆ ಕೂಡ ಒಂದಾಗಿದೆ. ರವೀಂದ್ರ ಜಡೇಜಾ ಇಂಜುರಿ ಇಂದ ಹೊರ ಹೋಗಿದ್ದಾಗ ದೀಪಕ್ ಹುಡಾ ಅವರನ್ನು ತಂಡದ ಒಳಕ್ಕೆ ಕರೆತಂದಿದ್ದು ನಿಜಕ್ಕೂ ಕೂಡ ಯಾವುದೇ ಲಾಜಿಕ್ ಅನ್ನು ಹೊಂದಿರಲಿಲ್ಲ. ಬೂಮ್ರಾ ಅವರನ್ನು ಹೊರತುಪಡಿಸಿ ಭಾರತೀಯ ತಂಡದ ಪ್ರಮುಖ ಬೌಲರ್ಗಳು ಬೇಕಾಗಿರುವ ಸಂದರ್ಭದಲ್ಲಿ ಪರಿಣಾಮಕಾರಿ ಬೌಲಿಂಗ್ ಅನ್ನು ಮಾಡುತ್ತಿಲ್ಲ. ಹೀಗಾಗಿ ವಿಶ್ವಕಪ್ ಗೂ ಮುನ್ನ ಬೌಲಿಂಗ್ ಕಾಂಬಿನೇಷನ್ ಅನ್ನು ಚೆನ್ನಾಗಿ ಸಿದ್ಧಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ತಂಡಕ್ಕೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ.

ದಿನೇಶ್ ಕಾರ್ತಿಕ್ ಅವರನ್ನು ತಂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಹಾಗೂ ಅಗ್ರ ಕ್ರಮಾಂಕದಲ್ಲಿ ರಾಹುಲ್ ಅವರು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಕೂಡ ಅವರನ್ನು ಮುಂದುವರಿಸಲಾಗುತ್ತಿದೆ. ರಿಷಬ್ ಪಂತ್ ಕೂಡ ಲಯ ಕಳೆದುಕೊಂಡಿದ್ದಾರೆ. ಏಷ್ಯಾ ಕಪ್ ಮುಗಿದ ನಂತರ ರೋಹಿತ್ ಶರ್ಮ ಟಿ20 ವಿಶ್ವಕಪ್ ಗೆ ಬೇಕಾಗಿರುವ ತಂಡ ಬಹುತೇಕ ಸಿದ್ದವಾಗಿದೆ ಎಂದಿದ್ದಾರೆ ಆದರೆ ಈ ಫಲಿತಾಂಶವನ್ನು ನೋಡಿದರೆ ಇನ್ನೂ ಹಲವಾರು ಪ್ರಶ್ನೆಗಳಿಗೆ ತಂಡಕ್ಕೆ ಉತ್ತರ ಸಿಕ್ಕಿಲ್ಲ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.