ದಿವ್ಯ ಸುರೇಶ್ ಈ ಬಾರಿ OTT ಬಿಗ್ ಬಾಸ್ ನಲ್ಲಿ ಸಪೋರ್ಟ್ ಮಾಡುತ್ತಿರುವುದು ಯಾರಿಗೆ ಗೊತ್ತೇ?? ಮಾಜಿ ಬಾಯ್ ಫ್ರೆಂಡ್ ಗೆ ಅಂತು ಅಲ್ಲವೇ ಅಲ್ಲ.

9

ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಇನ್ನೇನು ಒಂದೆರಡು ವಾರಗಳಲ್ಲಿ ಮುಗಿಯುವ ಹಂತಕ್ಕೆ ಬಂದಿದೆ. ಮನೆಯಲ್ಲಿರುವ ಹಲವಾರು ಸ್ಪರ್ಧಿಗಳು ಗೆಲ್ಲುವ ಹಕ್ಕಿಗೆ ಹೋರಾಡುತ್ತಿದ್ದು ಅದರಲ್ಲಿ ಕೆಲವು ಸ್ಪರ್ಧಿಗಳು ಮುಂಚೂಣಿಯಲ್ಲಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ತಮ್ಮ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ರಾಕೇಶ್ ಅಡಿಗ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವ ಫೇವರೇಟ್ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಸೋನು ಶ್ರೀನಿವಾಸ ಗೌಡ ಸೇರಿದಂತೆ ರೂಪೇಶ್ ಶೆಟ್ಟಿ ಮತ್ತು ಇನ್ನು ಹಲವು ಅಭ್ಯರ್ಥಿಗಳು ಕೂಡ ಈ ರೇಸ್ ನಲ್ಲಿ ಹಿಂದೆ ಏನು ಬಿದ್ದಿಲ್ಲ. ನಿಮಗೆ ಗೊತ್ತಿರಬಹುದು ಗೆಳೆಯರೇ ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ದಿವ್ಯ ಸುರೇಶ್ ಅವರು ರಾಕೇಶ್ ಅಡಿಗ ಅವರ ಹಳೆಯ ಗರ್ಲ್ ಫ್ರೆಂಡ್ ಆಗಿದ್ದಾರೆ. ಇದು ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾ ಗಳಲ್ಲಿ ಟ್ರೋಲ್ ಆಗಿತ್ತು. ದಿವ್ಯ ಸುರೇಶ್ ಅವರು ಕೂಡ ಈಗ ನಾವಿಬ್ಬರು ರಿಲೇಶನ್ ಶಿಪ್ ನಲ್ಲಿ ಇಲ್ಲ ಎಂಬುದನ್ನು ಸಂದರ್ಶನಗಳ ಮೂಲಕ ದೃಢಪಡಿಸಿದ್ದರು. ತಣ್ಣಗಿದ್ದ ಆ ಸುದ್ದಿ ಈಗ ಮತ್ತೆ ಹೊರ ಬಂದಿದೆ ಎಂದು ಹೇಳಬಹುದಾಗಿದೆ.

ಸದ್ಯಕ್ಕೆ ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿದ್ದಾರೆ ಆದರೆ ಆ ಕಡೆ ದಿವ್ಯ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಬೆಂಬಲಿಸುವಂತಹ ಪೋಸ್ಟ್ ಅನ್ನು ಹಾಕಿ ಕೂಡಲೇ ಡಿಲೀಟ್ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಮೂಲಕ ತಮ್ಮ ಮಾಜಿ ಪ್ರಿಯತಮನ ವಿರುದ್ಧ ಸ್ಪರ್ಧಿಗೆ ದಿವ್ಯ ಸುರೇಶ್ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಗ್ಗೆಯೂ ಕೂಡ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ದಿವ್ಯ ಸುರೇಶ್ ರವರನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.