ಶುರುವಾಯಿತು ಹಳೆ ಕೊಹ್ಲಿ ಅವತಾರ: ಸೆಂಚುರಿ ಗಳಿಸಿದ ಬೆನ್ನಲ್ಲೇ ವಿಶ್ವಕಪ್ ನ ಎಲ್ಲಾ ತಂಡಗಳಿಗೆ ಒಮ್ಮೆಲೇ ಎಚ್ಚರಿಕೆ ಸಂದೇಶ ಕೊಟ್ಟ ಕೊಹ್ಲಿ, ಹೇಳಿದ್ದೇನು ಗೊತ್ತೇ??

8

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಏಷ್ಯಾ ಕಪ್ ನಲ್ಲಿ ನಮ್ಮ ಭಾರತೀಯ ಕ್ರಿಕೆಟ್ ತಂಡದ ಕಿಂಗ್ ಕೊಹ್ಲಿ ಮತ್ತು ತಮ್ಮ ಉತ್ತಮ ಲಯಕೆ ಮರಳಿ ವಾಪಸ್ ಆಗಿದ್ದಾರೆ. ಈ ಮೂಲಕ ವಿಶ್ವಕಪ್ ಗೂ ಮುನ್ನವೇ ಎದುರಾಳಿ ತಂಡಗಳಿಗೆ ಒಂದು ಎಚ್ಚರಿಕೆಯನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕೂ ಮುನ್ನ ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಅವರು ಏಷ್ಯಾ ಕಪ್ ಪ್ರಾರಂಭವಾಗುತ್ತಿದ್ದಂತೆ ಆರಂಭದಿಂದ ಕೊನೆಯವರೆಗೂ ಕೂಡ ಒಟ್ಟಾರೆಯಾಗಿ 5 ಪಂದ್ಯಗಳನ್ನು ಆಡಿದ್ದಾರೆ.

ತಂಡದ ಏಕ ಮಾತ್ರ ಆಟಗಾರನಾಗಿ ಅತ್ಯಂತ ಹೆಚ್ಚು ರನ್ನುಗಳನ್ನು ಬಾರಿಸಿರುವ ಆಟಗಾರ ಎನ್ನುವ ಗರಿಮೆಗೆ ವಿರಾಟ್ ಕೊಹ್ಲಿ ಅವರು ಪಾತ್ರರಾಗಿದ್ದಾರೆ. 5 ಪಂದ್ಯಗಳ ಮುಖಾಂತರ ಬರೋಬ್ಬರಿ 276 ರನ್ನುಗಳನ್ನು ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ಈ ಬಾರಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ. ಅದರಲ್ಲಿ ವಿಶೇಷವಾಗಿ ಸೂಪರ್ ಫೋರ್ ಹಂತದ ಕೊನೆಯ ಪಂದ್ಯವಾಗಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭರ್ಜರಿ ಶತಕವನ್ನು ಬಾರಿಸುವ ಮೂಲಕ ತಾವು ಈ ಬಾರಿಯ ವಿಶ್ವಕಪ್ ಗೆ ಸಿದ್ದ ಎಂಬುದನ್ನು ಭರ್ಜರಿಯಾಗಿ ಘೋಷಿಸಿದ್ದಾರೆ.

ಹೌದು ಮಿತ್ರರೇ ವಿರಾಟ್ ಕೊಹ್ಲಿ ಅವರು ಬರೋಬ್ಬರಿ 122 ರನ್ನುಗಳನ್ನು ಅಫ್ಘಾನಿಸ್ತಾನದ ವಿರುದ್ಧ ಬಾರಿಸುವ ಮೂಲಕ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಗೆದ್ದ ಸಂಭ್ರಮದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಏಷ್ಯಾ ಕಪ್ ನಲ್ಲಿ ನಮಗೆ ಅಭೂತಪೂರ್ವ ಪ್ರೋತ್ಸಾಹವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಹಾಗೂ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಲಿದ್ದೇವೆ ಎಂಬುದಾಗಿ ಪರೋಕ್ಷವಾಗಿಯೇ ಟಿ 20 ವಿಶ್ವಕಪ್ ನಲ್ಲಿ ನಾವು ಬಲಾಢ್ಯ ಪ್ರದರ್ಶನವನ್ನು ತೋರ್ಪಡಿಸಲಿದ್ದೇವೆ ಎಂಬುದಾಗಿ ಎಚ್ಚರಿಕೆಯನ್ನು ವಿರಾಟ್ ಕೊಹ್ಲಿ ರವಾನಿಸಿದ್ದಾರೆ.