ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮ ತಂಡದಿಂದ ಔಟ್ ಆಗಲು ಕಾರಣವೇನು ಗೊತ್ತೇ?? ನಾಯಕ ರಾಹುಲ್ ಹೇಳಿದ್ದೇನು ಗೊತ್ತೇ??

6

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ನೇರಸಾವಾಗಿ ಮುಗಿಸಿದರು ಕೂಡ ಫಿನಿಶಿಂಗ್ ಹಂತದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ 101 ರನ್ನುಗಳ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಯಶಸ್ವಿ ಫಿನಿಶಿಂಗ್ ಟಚ್ ಅನ್ನು ನೀಡಿದೆ ಎಂದು ಹೇಳಬಹುದಾಗಿದೆ. ಆದರೆ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ವಿಭಿನ್ನವಾಗಿ ಕಾಣಿಸಿಕೊಂಡಿತ್ತು.

ಹೌದು ಭಾರತೀಯ ಕ್ರಿಕೆಟ್ ತಂಡ ಮತ್ತೊಮ್ಮೆ ನಾಯಕನ ಬದಲಾವಣೆ ಮಾಡಿಕೊಂಡಿದ್ದು ರೋಹಿತ್ ಶರ್ಮ ಅವರ ಬದಲಿಗೆ ಕೆ ಎಲ್ ರಾಹುಲ್ ಅವರು ಕ್ಯಾಪ್ಟನ್ ಆಗಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದರು. ರೋಹಿತ್ ಶರ್ಮಾ ಅವರು ಕೊನೆಯ ಪಂದ್ಯದಿಂದ ಹೊರ ಹೋಗಿದ್ದಕ್ಕೆ ಹಲವಾರು ಅನುಮಾನಗಳು ಹುಟ್ಟುಕೊಂಡಿದ್ದವು ಆದರೆ ಟಾಸ್ ಸಮಯದಲ್ಲಿ ಕೆಎಲ್ ರಾಹುಲ್ ರವರು ಎಲ್ಲಾ ಅನುಮಾನಗಳನ್ನು ಕೂಡ ಪರಿಹರಿಸಿದ್ದಾರೆ. ಯಾವುದೇ ಇಂಜುರಿಯ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಗೆ ಕುಳಿತಿಲ್ಲ ಬದಲಾಗಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಕೆ ಎಲ್ ರಾಹುಲ್ ಹೇಳಿದ್ದಾರೆ.

ಯಾವುದೇ ಲಾಭ ಇಲ್ಲದಿದ್ದರೂ ಕೂಡ ಕೊನೆಯ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಡಿದ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಸಮಾಧಾನವನ್ನು ತರಿಸಿತ್ತು. ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಭುವನೇಶ್ವರ್ ಕುಮಾರ್ ಅವರ ಐದು ವಿಕೆಟ್ ಗಳ ಅದ್ಭುತ ಪ್ರದರ್ಶನ ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದೆ. ಅದರಲ್ಲಿಯೂ ವಿಶೇಷವಾಗಿ ವಿಶ್ವಕಪ್ ಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಗೆ ಮತ್ತೆ ಮರಳಿ ಬಂದಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.