ಖ್ಯಾತ ನಟಿಯನ್ನು ಮದುವೆಯಾಗಿರುವ ರವೀಂದರ್, ಮುದ್ದು ಮುಖದ ನಟಿಗೆ ನೀಡಿರುವ ದುಬಾರಿ ಉಡುಗೊರೆಗಳನ್ನು ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ.

11

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ತಮಿಳು ಚಿತ್ರರಂಗದ ಹಾಗೂ ಕಿರುತೆರೆಯ ಖ್ಯಾತ ನಟಿ ಮಹಾಲಕ್ಷ್ಮಿ ಅವರು ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ರವೀಂದ್ರ ಚಂದ್ರಶೇಖರ್ ಅವರನ್ನು ಮದುವೆ ಆಗಿರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಗೆ ಇವರಿಬ್ಬರ ಮದುವೆಯನ್ನು ಫೇಕ್ ಎಂಬುದಾಗಿ ನೆಟ್ಟಿಗರು ಭಾವಿಸಿದ್ದರು ಯಾಕೆಂದರೆ ಯಾವುದೇ ಸಿನಿಮಾದ ಅಥವಾ ಧಾರವಾಹಿಯ ಚಿತ್ರೀಕರಣ ಇರುವುದಾಗಿ ಎಲ್ಲರೂ ಭಾವಿಸಿದ್ದರು.

ಆದರೆ ಸೆಪ್ಟೆಂಬರ್ ಒಂದರಂದು ಇವರು ಅಧಿಕೃತವಾಗಿ ತಿರುಪತಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದ ನಂತರ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಇವರಿಬ್ಬರ ಬಗ್ಗೆ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಯಾರೇನೇ ಟ್ರೊಲ್ ಮಾಡಿದರು ಕೂಡ ಇವರಿಬ್ಬರು ಇದು ನಿಜವಾದ ಪ್ರೀತಿ ನಾವಿಬ್ಬರು ಕೊನೆಯವರೆಗೂ ಜೊತೆಯಾಗಿಯೇ ಇರುತ್ತೇವೆ ಎಂಬುದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋ ಪೋಸ್ಟ್ ಮಾಡುವುದರ ಮೂಲಕ ದೃಢಪಡಿಸಿದ್ದಾರೆ. ಸದ್ಯಕ್ಕೆ ರವೀಂದ್ರನ್ ಚಂದ್ರಶೇಖರ್ ಅವರು ಮದುವೆಯಾದ ನಂತರ ಮಹಾಲಕ್ಷ್ಮಿ ಅವರಿಗೆ ದುಬಾರಿ ಬೆಳೆಯ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿದೆ ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ತಿಳಿದುಬಂದಿಲ್ಲ.

ರವೀಂದ್ರನ್ ಅವರು ಮಹಾಲಕ್ಷ್ಮಿ ಅವರಿಗೆ 300 ರೇಷ್ಮೆ ಸೀರೆ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು, 75 ಲಕ್ಷ ರೂಪಾಯಿಗಳು ಅಧಿಕ ಬೆಲೆಬಾಳುವ ಹೊಸ ಐಷಾರಾಮಿ ಮನೆಯನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಇವರಿಬ್ಬರು ಮಲಗುವ ಮಂಚ ಚಿನ್ನದ ಲೇಪನವನ್ನು ಹೊಂದಿರಲಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಮದುವೆಯಾದ ಹೊಸದರಲ್ಲಿ ರವೀಂದ್ರನ್ ಚಂದ್ರಶೇಖರ್ ಅವರು ತಮ್ಮ ಎರಡನೇ ಪತ್ನಿ ಮಹಾಲಕ್ಷ್ಮಿ ಅವರಿಗೆ ಇಷ್ಟೆಲ್ಲ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.