ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ರವರ ಸೀಮಂತಕ್ಕೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ?? ಉಡುಗೊರೆ ಶಾಕ್ ಆದ ಫ್ಯಾನ್ಸ್.

35

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಶಂಕರ್ ಅವರು ತಂದೆ-ತಾಯಿ ಆಗಲಿದ್ದಾರೆ. ಈಗಾಗಲೇ ಎಂಟು ತಿಂಗಳು ಕಳೆದು 9ನೇ ತಿಂಗಳಿಗೆ ಕಾಲಿಟ್ಟಿದ್ದಾರೆ ಪ್ರೇರಣಾ ಶಂಕರ್. ಇದುವರೆಗೂ ಕೂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು.

ಮೊದಲ ಬಾರಿಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ನಾವಿಬ್ಬರು ತಂದೆ ತಾಯಿ ಆಗುತ್ತಿದ್ದೇವೆ ಎಂಬುದನ್ನು ಅಭಿಮಾನಿಗಳಿಗೆ ಹಾಗೂ ಎಲ್ಲಾ ಜನರಿಗೂ ಅಧಿಕೃತವಾಗಿ ಘೋಷಿಸಿದರು. ಧ್ರುವ ಸರ್ಜಾ ಅವರ ಸಹೋದರ ಚಿರು ಸರ್ಜಾ ಅವರ ಪತ್ನಿ ಆಗಿರುವ ಮೇಘನ ರಾಜ್ ಕೂಡ ಇಬ್ಬರಿಗೂ ಶುಭ ಹಾರೈಸಿದ್ದಾರೆ. ಇದೇ ಸಪ್ಟೆಂಬರ್ ತಿಂಗಳಿನಲ್ಲಿ ಪ್ರೇರಣಾ ಶಂಕರ್ ಮಗುವಿಗೆ ಜನ್ಮ ನೀಡಲಿದ್ದು ಇದಕ್ಕಾಗಿ ಸೀಮಂತ ಶಾಸ್ತ್ರವನ್ನು ಧ್ರುವ ಸರ್ಜಾ ಅವರು ಅದ್ದೂರಿಯಾಗಿ ಆಯೋಜನೆ ಮಾಡುವಂತಹ ಕಾರ್ಯಪ್ರವೃತ್ತರಾಗಿದ್ದಾರೆ.

ಇನ್ನು ಇದರ ಮುನ್ನವೇ ಡಿ ಬಾಸ್ ಇಬ್ಬರೂ ದಂಪತಿಗಳಿಗೂ ಕೂಡ ಒಂದು ಅರ್ಥಪೂರ್ಣವಾದ ಉಡುಗೊರೆಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್ ದಂಪತಿಗಳನ್ನು ಮನೆಗೆ ಕರೆಸಿಕೊಂಡು ಪ್ರೇರಣ ಅವರಿಗೆ ಅರಿಶಿನ ಕುಂಕುಮವನ್ನು ನೀಡಿ ಧ್ರುವ ಸರ್ಜಾ ಅವರಿಗೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿ ಮಾತನ್ನು ಹೇಳಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಡಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ.