ಮತ್ತಷ್ಟು ಬೆಳೆದ ಇಂಜುರಿ ಪಟ್ಟಿ: ಭಾರತಕ್ಕೆ ಮತ್ತೊಂದು ಬಿಗ್ ಶಾಕ್; ತಂಡದಿಂದ ಹೊರಹೋದ ಪ್ರಮುಖ ಆಟಗಾರ. ಯಾರು ಗೊತ್ತೇ??

189

ನಮಸ್ಕಾರ ಸ್ನೇಹಿತರೆ ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಲು ಸಾಲಾಗಿ ಸೋಲು ಕಾಣುವುದಕ್ಕೆ ತಂಡದ ಪ್ರಮುಖ ಆಟಗಾರರ ಇಂಜುರಿಯೇ ವಿಲನ್ ಆಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಏಷ್ಯಾಕಪ್ ಟೂರ್ನಿಯಾ ಆರಂಭದಲ್ಲಿಯೇ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದ ರವೀಂದ್ರ ಜಡೇಜಾ ಅವರು ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಹೋದರು.

ಏಷ್ಯಾ ಕಪ್ ಟೂರ್ನಿಯಾ ಆರಂಭಕ್ಕೂ ಮುನ್ನವೇ ತಂಡದ ಪ್ರಮುಖ ಬೌಲರ್ಗಳಾಗಿದ್ದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅವರು ಇಂಜುರಿಯ ಕಾರಣದಿಂದಾಗಿ ತಂಡದಿಂದ ಮೊದಲೇ ಹೊರ ಬಿದ್ದಿದ್ದರು. ಈಗ ಸೂಪರ್ ಫೋರ್ ಹಂತದಲ್ಲಿ ಭಾರತ ಕ್ರಿಕೆಟ್ ತಂಡ ಈಗಾಗಲೇ ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯಗಳ ಎದುರು ಸೋತು ಸುಣ್ಣವಾಗಿದ್ದು ಇದರ ನಡುವೆ ಮತ್ತೊಬ್ಬ ಇಂಜುರಿ ಆಟಗಾರ ತಂಡದಿಂದ ಹೊರ ಹೋಗಿದ್ದಾರೆ. ಹೌದು ಆವೇಶ್ ಖಾನ್ ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಂಡದಿಂದ ವಿಶ್ರಾಂತಿಯನ್ನು ಪಡೆದಿದ್ದರೂ ಆದರೆ ಅದು ಉಲ್ಬಣವಾಗಿದ್ದು ಈಗ ತಂಡದಿಂದಲೇ ಹೊರ ನಡೆಯಬೇಕಾದ ಪರಿಸ್ಥಿತಿ ಬಂದಿದೆ. ಈಗಾಗಲೇ ಟೂರ್ನಮೆಂಟ್ ನಿಂದ ಹೊರ ಬಿದ್ದಿರುವ ಭಾರತೀಯ ಕ್ರಿಕೆಟ್ ತಂಡ ಕೊನೆಯ ಪಂದ್ಯವನ್ನು ಆಫ್ಘಾನಿಸ್ತಾನದ ವಿರುದ್ಧ ಆಡಬೇಕಾಗಿದೆ.

ಹೀಗಾಗಿ ಈ ಪಂದ್ಯದಲ್ಲಿ ಆವೇಶ್ ಖಾನ್ ಅವರ ಬದಲಿಗೆ ತಂಡದಲ್ಲಿ ಮೂರು ಸ್ಪೀಡ್ ಬೌಲರ್ ಗಳು ಆಡಲಿದ್ದಾರೆ. ಈಗಾಗಲೇ ಇರುವ ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ರವರ ಜೊತೆಗೆ ದೀಪಕ್ ಚಹಾರ್ ಕೂಡ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಈ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿದೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.