ಜೀವನದಲ್ಲಿ ಮಗು ಬೇಕು ಎಂದರೆ ಮದುವೆ ಏನು ಆಗಬೇಕು ಎಂದಿಲ್ಲ ಖ್ಯಾತ ನಟಿ ತಬು: ಹೀಗೆ ಹೇಳಿದ್ದು ಯಾಕೆ ಗೊತ್ತೆ??

38

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವುದು ಹೊಸದೇನಲ್ಲ. ಅದರಲ್ಲೂ ಒಂದು ಕಾಲದಲ್ಲಿ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಸಾಕಷ್ಟು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅಂದಿನ ಕಾಲದ ನಟಿ ಒಬ್ಬರ ಕುರಿತಂತೆ ಎಂದು ಮಾತನಾಡಲು ಹೊರಟಿದ್ದೇವೆ‌. ಅಂದಿನ ಕಾಲ ಎಂದಾಕ್ಷಣ ಸಾಕಷ್ಟು ಹಿಂದಕ್ಕೆ ಹೋಗುವುದು ಬೇಡ.

ಹೌದು ನಾವ್ ಮಾತನಾಡುತ್ತಿರುವುದು ಇಂದಿಗೂ ಕೂಡ ವಯಸ್ಸಾಗಿದ್ದರು ಹರಿಹರಿಯದ ಯುವತಿಯಂತೆ ಕಾಣುವ ನಟಿ ತಬು ಅವರ ಕುರಿತಂತೆ. ತಬು ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತ್ತೀಚಿಗಷ್ಟೇ ಅಲ್ಲು ಅರ್ಜುನ ನಟನೆಯ ಹಲವು ಸಿನಿಮಾದಲ್ಲಿ ಕೂಡ ನಟಿಸಿ ಹೋಗಿದ್ದಾರೆ. ಇನ್ನು ಸದ್ಯಕ್ಕೆ ವಯಸ್ಸು 51 ಆಗಿದ್ದರೂ ಕೂಡ ಯಾವುದೇ ಸ್ಟಾರ್ ನಟಿಯರಿಗೂ ಕಡಿಮೆ ಇಲ್ಲದಂತೆ ತಮ್ಮ ಸೌಂದರ್ಯವನ್ನು ಮೇಂಟೈನ್ ಮಾಡಿದ್ದಾರೆ. ಆದರೆ ಇತ್ತೀಚಿಗಷ್ಟೇ ಅವರು ನೀಡಿರುವ ಒಂದು ಹೇಳಿಕೆಯ ಕಾರಣಕ್ಕಾಗಿ ಸಾಕಷ್ಟು ವಿವಾದಕ್ಕೆ ಕಾರಣಿಕರ್ತರಾಗಿದ್ದಾರೆ. ಅಷ್ಟಕ್ಕೂ ತಬು ಅವರು ಹೇಳಿದ್ದಾದರೂ ಏನು ಎಂಬುದಾಗಿ ನೀವು ಆಶ್ಚರ್ಯ ಪಡಬಹುದು.

ಸಂದರ್ಶನದಲ್ಲಿ ನಿಮಗೆ ತಾಯಿಯಾಗುವ ಕುರಿತಂತೆ ಯಾವುದೇ ಆಲೋಚನೆಗಳು ಬಂದಿಲ್ವಾ ಎನ್ನುವುದಾಗಿ ಪ್ರಶ್ನೆಯನ್ನು ಕೇಳಿದಾಗ ತಬು, ತಾಯಿ ಆಗಬೇಕೆಂದರೆ ಮದುವೆ ಆಗಲೇ ಬೇಕೆಂದಿಲ್ಲ ಮದುವೆ ಆಗದೆಯೂ ಕೂಡ ತಾಯಿ ಆಗಬಹುದಾಗಿದೆ ಎಂಬುದಾಗಿ ಉತ್ತರ ನೀಡಿದ್ದರು. ಹೌದು ಬಾಡಿಗೆ ತಾಯ್ತನದ ಮೂಲಕವೂ ಕೂಡ ತಾಯಿ ಆಗಬಹುದಾಗಿದೆ ಒಂದು ವೇಳೆ ನನಗೆ ತಾಯಿಯಾಗಬೇಕು ಎನ್ನುವ ಇಚ್ಛೆ ಬಂದರೆ ಈ ಕುರಿತಂತೆ ಆಲೋಚನೆ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಕಾಲದಲ್ಲಿ ಮದುವೆ ಆಗಲೇಬೇಕು ಎನ್ನುವ ನಿಯಮವಿಲ್ಲ ನನಗೆ ಇಷ್ಟ ಆಗುವ ಹಾಗೂ ಹೆಣ್ಣನ್ನು ಅತ್ಯಂತ ಗೌರವಿಸುವ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾರೆ.