ಬಿಗ್ ನ್ಯೂಸ್: ಎರಡು ರಾಶಿಗಳಿಗೆ ಶನಿ ದೇವನ ಕೃಪೆ ಫಿಕ್ಸ್: ಕಂಡು ಕೇಳರಿಯದ ಯಶಸ್ಸು ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??

4,004

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ನ್ಯಾಯದ ದೇವರು ಎಂಬುದಾಗಿ ಕರೆಯಲಾಗುತ್ತದೆ. ಒಂದು ವೇಳೆ ಕೆಟ್ಟ ಕೆಲಸ ಮಾಡಿದರೆ ಖಂಡಿತವಾಗಿ ತನ್ನ ವಕ್ರ ದೃಷ್ಟಿಯಿಂದ ಶನಿದೇವ ಆತನ ಜೀವನದಲ್ಲಿ ಸಾಕಷ್ಟು ಕಷ್ಟ ಪಡುವಂತೆ ಮಾಡುತ್ತಾನೆ. ಒಂದು ವೇಳೆ ಶನಿಯ ಅನುಗ್ರಹ ಸಿಕ್ಕರೆ ಭಿಕ್ಷುಕನು ಕೂಡ ರಾತ್ರಿ ಬೆಳಗಾಗುವಷ್ಟರೊಳಗೆ ಶ್ರೀಮಂತನಾಗಿರುತ್ತಾನೆ. ಅದರಲ್ಲೂ ಮಕರ ರಾಶಿಯಲ್ಲಿ ಸದ್ಯಕ್ಕೆ ಶನಿ ವಕ್ರ ನಡೆಯಲಿದ್ದಾನೆ. ಇದೇ ಅಕ್ಟೋಬರ್ 23 ರಿಂದ ಮುಂದಿನ ವರ್ಷದ ಜನವರಿ 17ರವರೆಗೆ ನೇರ ನಡೆಯಲ್ಲಿ ಶನಿದೇವ ನಡೆಯಲಿದ್ದಾನೆ. ಈ ಸಂದರ್ಭದಲ್ಲಿ ಎರಡು ರಾಶಿಯವರಿಗೆ ಸಾಕಷ್ಟು ಲಾಭಗಳು ಸಿಗುತ್ತವೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿವೆ. ಹಾಗಿದ್ದರೆ ಆ ಎರಡು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ; ಶನಿಯ ನೇರ ಸಂಚಾರವು ಮೇಷ ರಾಶಿಯವರಿಗೆ ಸಾಕಷ್ಟು ಶುಭ ಲಾಭಗಳ ಹರಿವನ್ನು ತರಲಿದೆ. ಒಂದರ ಮೇಲೊಂದರಂತೆ ಎಲ್ಲಾ ಕಾರ್ಯಗಳಲ್ಲಿ ಕೂಡ ಯಶಸ್ಸನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಇನ್ನಷ್ಟು ಉನ್ನತ ಹಂತಕ್ಕೆ ತಲುಪುವ ಹಲವಾರು ಅವಕಾಶಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಹಲವಾರು ಉದ್ಯೋಗಾವಕಾಶಗಳು ಕೂಡ ನಿಮ್ಮ ಕಾಲ ಬುಡಕ್ಕೆ ಬಂದು ಬೀಳಲಿವೆ. ನಿಮ್ಮ ಆದಾಯ ಗಣನೀಯವಾಗಿ ಹೆಚ್ಚಾಗಲಿದೆ ಹಾಗೂ ಒಂದು ವೇಳೆ ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ಲಾಭವು ಕೂಡ ದೊಡ್ಡ ಮಟ್ಟದಲ್ಲಿ ಏರಿಕೆ ಆಗಲಿದೆ. ಈ ಸಂದರ್ಭದಲ್ಲಿ ಸಂತೋಷ ಕುಟುಂಬದಲ್ಲಿ ತುಂಬಿ ತುಳುಕಾಡಲಿದ್ದು ನವ ವಿವಾಹಿತರು ಇದ್ದರೆ ವೈವಾಹಿಕ ಜೀವನದ ಸಂತೋಷವನ್ನು ಅತಿ ಶೀಘ್ರದಲ್ಲಿ ಕಾಣಲಿದ್ದೀರಿ.

ಧನು ರಾಶಿ; ಶನಿಯ ಪ್ರಭಾವದಿಂದಾಗಿ ಧನು ರಾಶಿಯವರಿಗೆ ಮಾಡುತ್ತಿರುವ ಕೆಲಸದಲ್ಲಿ ಇದುವರೆಗೂ ಕಂಡು ಬರುತ್ತಿದ್ದ ಎಲ್ಲಾ ಅಡೆತಡೆಗಳು ಕೂಡ ನಿವಾರಣೆ ಆಗಲಿದೆ. ನಿಮಗೆ ಗೊತ್ತಿಲ್ಲದ ಹಾಗೆ ಹಲವಾರು ಮೂಲಗಳಿಂದ ಹಣ ನಿಮ್ಮ ಕೈ ಸೇರಲಿದ್ದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೂಡ ಪ್ರಮೋಷನ್ ಸಿಗಲಿದೆ. ಸಂಬಳ ಕೂಡ ಉದ್ಯೋಗಸ್ಥರಿಗೆ ಜಾಸ್ತಿ ಆಗಲಿದೆ. ಉದ್ಯಮಿಗಳಿಗೆ ಈ ಸಂದರ್ಭ ಎನ್ನುವುದು ಹೂಡಿಕೆ ಮಾಡುವುದಕ್ಕೆ ಅತ್ಯುತ್ತಮ ಸಮಯವಾಗಿದೆ. ಈ ಸಮಯದಲ್ಲಿ ಶನಿಯಿಂದ ಲಾಭವನ್ನು ಪಡೆಯಲಿರುವ ರಾಶಿಯವರು ಇವರೇ.