ಪಂದ್ಯಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದ ಗಂಭೀರ್: ಈ ಬೌಲರ್ ಅನ್ನು ಪಂದ್ಯಕ್ಕೆ ಸೇರಿಸಿಕೊಂಡಿದ್ದರೇ ಪಂದ್ಯದ ಗತಿಯೇ ಬದಲಾಗುತಿತ್ತೇ??

12

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಪಾಕಿಸ್ತಾನ ತಂಡದ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯವನ್ನು 5 ವಿಕೆಟ್ಗಳ ಅಂತರದಲ್ಲಿ ಸೋತಿತ್ತು. ಇದರಲ್ಲಿ ಖಂಡಿತವಾಗಿ ತಂಡದ ಬೌಲಿಂಗ್ ವೈಫಲ್ಯತೆ ಕಂಡುಬಂದಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎರಡನೇ ಪಂದ್ಯವಾಗಿ ಶ್ರೀಲಂಕಾ ವನ್ನು ಎದುರಿಸಿತ್ತು.

ಈಗಾಗಲೇ ಬೌಲಿಂಗ್ ವೈಫಲ್ಯವನ್ನು ಕಂಡಿದ್ದ ಭಾರತೀಯ ಕ್ರಿಕೆಟ್ ತಂಡ ಬೌಲಿಂಗ್ ನಲ್ಲಿ ಕೊಂಚಮಟ್ಟಿಗೆ ಬದಲಾವಣೆಯನ್ನು ಮಾಡಿಕೊಳ್ಳುತ್ತದೆ ಎಂಬುದಾಗಿ ಭಾವಿಸಲಾಗಿತ್ತು ಅದು ಕೇವಲ ಸ್ಪಿನ್ ಬೌಲಿಂಗ್ ನಲ್ಲಿ ಮಾತ್ರ ಆಗಿತ್ತು. ಪಂದ್ಯದ ಆರಂಭಕ್ಕೂ ಮುನ್ನವೇ ತಂಡದ ಮಾಜಿ ಕ್ರಿಕೆಟಿಗ ಆಗಿರುವ ಗೌತಮ್ ಗಂಭೀರ್ ಅವರು ಬೌಲಿಂಗ್ ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದರು. ಒಂದು ವೇಳೆ ಆ ಸೂಚನೆಯನ್ನು ಟೀಮ್ ಇಂಡಿಯಾ ಪಾಲಿಸಿದ್ದರೆ ಖಂಡಿತವಾಗಿ ಏಷ್ಯಾ ಕಪ್ ನಲ್ಲಿ ಫೈನಲ್ ಹಂತಕ್ಕೆ ತೇರ್ಗಡೆ ಆಗುವ ಕನಸನ್ನು ಜೀವಂತವಾಗಿರಿಸಿಕೊಳ್ಳಬಹುದಿತ್ತೇನೋ ಎಂಬುದಾಗಿ ಎಲ್ಲರೂ ಕೂಡ ಈಗ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.

ಅಷ್ಟಕ್ಕೂ ಪಂದ್ಯಕ್ಕೂ ಮುನ್ನ ಗೌತಮ್ ಗಂಭೀರ್ ಏನು ಹೇಳಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಆವೇಷ್ ಖಾನ್ ಅವರನ್ನು ಚಹಾಲ್ ಬದಲಿಗೆ ತಂಡದಲ್ಲಿ ಬೌಲಿಂಗ್ ನಲ್ಲಿ ಸೇರಿಸಿಕೊಂಡಿದ್ದರೆ ತಂಡಕ್ಕೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಇನ್ನಷ್ಟು ಕೊಂಚಮಟ್ಟಿಗೆ ಬಲ ಸಿಕ್ಕಂತೆ ಆಗುತ್ತಿತ್ತು ಎಂಬುದಾಗಿ ಗೌತಮ್ ಗಂಭೀರ್ ಪಂದ್ಯಕ್ಕೂ ಮುನ್ನ ಹೇಳಿದ್ದರು. ಆದರು ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡ ಬೌಲಿಂಗ್ ವೈಫಲ್ಯಕ್ಕೆ ಸಿಲುಕಿ ಮತ್ತೆ ಸೋತು ಏಷ್ಯಾ ಕಪ್ ನಿಂದ ಅಧಿಕೃತವಾಗಿ ಹೊರ ಬಿದ್ದಿದೆ ಎಂದು ಹೇಳಬಹುದಾಗಿದೆ.