ಮನೆಯಲಿ ತುಳಸಿ ಗಿಡ ಇಟ್ಟು, ಈ ರೀತಿ ಪೂಜೆ ಮಾಡಿ, ಲಕ್ಷ್ಮಿ ದೇವಿ ಶಾಶ್ವತವಾಗಿ ನೆಲೆಸುತ್ತಾಳೆ. ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೆ ಹಿಂದೂ ಸಂಸ್ಕೃತಿಯಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಮೂಲ ದೇವತೆ ಎಂಬುದಾಗಿ ಕರೆಯಲಾಗುತ್ತದೆ. ಲಕ್ಷ್ಮಿ ಒಲಿದರೆ ಆರ್ಥಿಕ ಪರಿಸ್ಥಿತಿ ಎನ್ನುವುದು ಸಾಕಷ್ಟು ಬಲವಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಹಾಗಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಕಾಲ ನೆಲೆಸಿರಲು ಏನು ಮಾಡಬೇಕು ಎಂಬುದರ ಕುರಿತಂತೆ ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ. ಪುರಾಣ ಗ್ರಂಥಗಳ ಹಾಗೂ ಶಾಸ್ತ್ರಿಗಳ ಪ್ರಕಾರ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಎಂಬುದಾಗಿ ಪೂಜಿಸಲಾಗುತ್ತದೆ ಹಾಗೂ ಈ ತುಳಸಿ ಗಿಡದಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಕೂಡ ಇದೆ.
ಲಕ್ಷ್ಮಿ ಇದ್ದಲ್ಲಿ ವಿಷ್ಣು ಕೂಡ ನೆಲೆಸಿರುತ್ತಾನೆ ಎಂಬುದು ನಂಬಿಕೆ. ಹೀಗಾಗಿ ತುಳಸಿ ಗಿಡಕ್ಕೆ ಮುಂಜಾನೆ ಹಾಗೂ ಸಾಯಂಕಾಲ ಎರಡು ಹೊತ್ತು ಕೂಡ ಪೂಜೆ ಮಾಡಬೇಕು. ಮುಂಜಾನೆ ಹೊತ್ತಿನಲ್ಲಿ ನೀರಿನ ಅಭಿಷೇಕ ಮಾಡಿದರೆ ಸಾಯಂಕಾಲದ ಹೊತ್ತಿನಲ್ಲಿ ದೀಪದ ಮೂಲಕ ಪೂಜೆ ಮಾಡಬೇಕು. ತುಳಸಿ ಗಿಡಕ್ಕೆ ಕೆಲವೊಂದು ಪೂಜೆ ಮಾಡುವ ಮೂಲಕ ಲಕ್ಷ್ಮೀದೇವಿಯ ಶಾಶ್ವತ ಅನುಗ್ರಹಕ್ಕೆ ಪಾತ್ರರಾಗಬಹುದು ಎನ್ನುವುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಅವುಗಳೇನೆಂಬುದನ್ನು ವಿವರವಾಗಿ ತಿಳಿಯೋಣ. ತುಳಸಿ ಪೂಜೆಯ ಸಂದರ್ಭದಲ್ಲಿ ಇದೊಂದು ಮಂತ್ರವನ್ನು 108 ಬಾರಿ ಜಪಿಸಿದರೆ ಲಕ್ಷ್ಮೀದೇವಿಯ ಅನುಗ್ರಹಕ್ಕೆ ನೀವು ಪಾತ್ರರಾಗಬಹುದಾಗಿದೆ. ಹಾಗಿದ್ದರೆ ಆ ಮಂತ್ರವನ್ನು ತಿಳಿಯೋಣ. ” ಮಹಾಪ್ರಸಾದ್ ಜನನಿ ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ ತುಳಸಿ ತ್ವಂ ನಮೋಸ್ತುತೇ ”.

ಪ್ರತಿಯೊಂದು ತುಳಸಿ ಪೂಜೆಯ ಸಂದರ್ಭದಲ್ಲಿ ಈ ಪವಿತ್ರ ಮಂತ್ರವನ್ನು ಪಠಿಸುವುದರ ಮೂಲಕ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಿ ನಕಾರಾತ್ಮಕತೆ ದೂರವಾಗುತ್ತದೆ. ನಿಮ್ಮ ಕಷ್ಟಭರಿತ ಜೀವನದ ಮೇಲೆ ಲಕ್ಷ್ಮೀದೇವಿಯ ಕರುಣೆಯ ಕೃಪಾಕಟಾಕ್ಷ ಒಲಿಯುತ್ತದೆ. ಆದರೆ ಒಂದನ್ನು ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ನೀವು ಶುದ್ದಿ ಆಗದೆ ಅಂದರೆ ಸ್ನಾನ ಮಾಡದೆ ಪವಿತ್ರ ತುಳಸಿ ಗಿಡವನ್ನು ಎಂದಿಗೂ ಮುಟ್ಟಬೇಡಿ. ರಾತ್ರಿ ಅಥವಾ ಭಾನುವಾರದಂದು ತುಳಸಿ ಎಲೆಗಳನ್ನು ಕೀಳಬೇಡಿ. ಏಕಾದಶಿ ಎಂದು ತುಳಸಿ ಗಿಡಕ್ಕೆ ನೀರಿನ ಅಭಿಷೇಕವನ್ನು ಮಾಡಬೇಡಿ ಎನ್ನುವ ಕೆಲವೊಂದು ನಿಯಮಗಳನ್ನು ನೀವು ಅನುಸರಿಸಿದರೆ ಲಕ್ಷ್ಮೀದೇವಿಯ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾಗಿದೆ.