ಮುಗಿಯಿತು ಕರಾರುವಾಕ್ ಬೌಲರ್ ಜೀವನ: ಪಾಕ್ ವಿರುದ್ಧ ಸೋಲಿನ ಬಳಿಕ ಈತನೇ ವೃತ್ತಿ ಜೀವನವೇ ಅಂತ್ಯ: ಯಾರದ್ದು ಗೊತ್ತೇ??

85

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡದ ವಿರುದ್ಧ 5 ವಿಕೆಟ್ಗಳ ಸೋಲು ಕಾಣುವ ಮೂಲಕ ಮುಂದೆ ನಡೆಯಲಿರುವ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾಗಿರುವ ಒತ್ತಡಕ್ಕೆ ಸಿಲುಕಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಇದೇ ರೀತಿಯ ಮುಖಭಂಗವನ್ನು ಅನುಭವಿಸಿದ್ದು ಈ ವರ್ಷ ಏಷ್ಯಾ ಕಪ್ ನಲ್ಲಿ ಕೂಡ ಅದೇ ಪುನರಾವರ್ತನೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಪಾಕಿಸ್ತಾನ ತಂಡದ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತೀಯ ಕ್ರಿಕೆಟ್ ತಂಡ ಎರಡನೇ ಪಂದ್ಯದಲ್ಲಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಎಲ್ಲೋ ಒಂದು ಕಡೆ ಸಂಪೂರ್ಣವಾಗಿ ತನ್ನನ್ನು ಶರಣಾಗಿಸಿಕೊಂಡಿತ್ತು ಎಂದು ಹೇಳಿದರೆ ಕೂಡ ತಪ್ಪಾಗಲಾರದು.

ಅದರಲ್ಲೂ ವಿಶೇಷವಾಗಿ ಈ ಒಬ್ಬ ಆಟಗಾರ ಈ ಪ್ರಮುಖ ಪಂದ್ಯದಲ್ಲಿ ಮಾಡಿರುವ ಎಡವಟ್ಟಿನಿಂದಾಗಿ ಏಷ್ಯಾ ಕಪ್ ನಂತರ ಆತನ ಕ್ರಿಕೆಟ್ ಕರಿಯರ್ ಅಂತ್ಯಗೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಹೌದು ನಾವು ಮಾತನಾಡುತ್ತಿರುವುದು ತಂಡದ ಅತ್ಯಂತ ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಅವರ ಬಗ್ಗೆ. ಪಾಕಿಸ್ತಾನ ವಿರುದ್ಧ ಪ್ರಮುಖ ಪಂದ್ಯದಲ್ಲಿ ಅವರು ನಾಲ್ಕು ಓವರ್ ಗಳ ಕೋಟದಲ್ಲಿ ಬರೋಬ್ಬರಿ 40 ರನ್ನುಗಳನ್ನು ನೀಡಿ ಕೇವಲ ಒಂದು ವಿಕೆಟ್ಗಳನ್ನು ಮಾತ್ರ ಕಬಳಸಿದ್ದರು. ಅದರಲ್ಲೂ ವಿಶೇಷವಾಗಿ ಎರಡು ಓವರ್ ಗಳಲ್ಲಿ ಪಾಕಿಸ್ತಾನ ತಂಡ 26 ರನ್ನುಗಳನ್ನು ಬಾರಿಸಬೇಕಾಗಿತ್ತು.

19ನೇ ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಬರೋಬ್ಬರಿ 19 ರನ್ನುಗಳನ್ನು ಬಿಟ್ಟುಕೊಟ್ಟರು. ಇದು ಭಾರತೀಯ ಕ್ರಿಕೆಟ್ ತಂಡದ ಸೋಲಿನ ಪ್ರಮುಖ ಕಾರಣವಾಗಿತ್ತು. ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಿಂದ ತಂಡದಿಂದ ಹೊರಗಿರುವ ಭುವನೇಶ್ವರ್ ಕುಮಾರ್ ಟಿ20 ಕ್ರಿಕೆಟ್ ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದರು ಆದರೆ ಇಂತಹ ಬೌಲಿಂಗ್ ಅನ್ನು ಪ್ರದರ್ಶಿಸುವ ಮೂಲಕ ನಾಯಕನ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನ ನಂಬುಗೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಈ ಮೂಲಕ ತಮ್ಮ ಸ್ಥಾನವನ್ನು ತಾವೇ ತಂಡದಿಂದ ಹೊರಗೆ ಉಳಿಯುವಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.