ಎಲ್ಲರೂ ಕೈ ಕೊಟ್ಟರು, ಆತ ಒಬ್ಬನೇ ಅಂದುಕೊಂಡಂತೆ ಆಡಿದ್ದು, ಸೋತ ಬಳಿಕ ಎಚ್ಚೆತ್ತುಕೊಂಡು ರೋಹಿತ್ ಹೇಳಿದ್ದೇನು ಗೊತ್ತೇ??

36

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ನಿನ್ನೆ ನಡೆದಿರುವ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್ಗಳ ಸೋಲನ್ನು ಕಂಡಿದೆ. ನಿಜಕ್ಕೂ ಕೂಡ ಇದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಮೂಡಿಸಿದೆ. ಪ್ರಾರಂಭದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ ನೇತೃತ್ವದ ಭಾರತೀಯ ಪಡೆ ವಿರಾಟ್ ಕೊಹ್ಲಿ ಅವರ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದಾಗಿ ಏಳು ವಿಕೆಟ್ ಗಳ ನಷ್ಟಕ್ಕೆ 181 ರನ್ನುಗಳ ಮೊತ್ತವನ್ನು ಪೇರಿಸಿತು.

182 ರನ್ನುಗಳ ಗುರಿಯನ್ನು ಪಡೆದುಕೊಂಡ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತೀಯ ಕ್ರಿಕೆಟ್ ತಂಡದ ಕಳಪೆ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ ಒಂದು ಎಸೆತ ಉಳಿದಿರುವಂತೆ ಗುರಿಯನ್ನು ರಿಜ್ವಾನ್ ಹಾಗೂ ನವಾಜ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಾಧಿಸಿತು. ಇನ್ನು ಪಂದ್ಯ ಮುಗಿದ ನಂತರ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಆ ಒಬ್ಬ ಕ್ರಿಕೆಟಿಗನ ಕುರಿತಂತೆ ಮನಸಾರೆ ಹೊಗಳಿದ್ದಾರೆ. ಹೌದು ತಂಡ ಸೋತಿದ್ದರು ಕೂಡ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನದ ಕುರಿತಂತೆ ರೋಹಿತ್ ಶರ್ಮಾ ಮನಸಾರೆ ಹೊಗಳಿದ್ದಾರೆ.

ಒಂದು ಕಡೆಯಲ್ಲಿ ವಿಕೆಟ್ ಉರುಳುತ್ತಿದ್ದರೂ ಕೂಡ ವಿರಾಟ್ ಕೊಹ್ಲಿ ಅವರು ದೃಢವಾಗಿ ನಿಂತು ತಂಡಕ್ಕೆ ಅಗತ್ಯವಾದ ರನ್ನುಗಳನ್ನು ಕಲೆ ಹಾಕಿಕೊಟ್ಟಿದ್ದಾರೆ ನಿಜಕ್ಕೂ ಕೂಡ ಅವರ ಇನ್ನಿಂಗ್ಸ್ ತಂಡಕ್ಕೆ ಅತ್ಯಗತ್ಯವಾಗಿತ್ತು ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅವರು ಮೊದಲೇ ಹಾಕುತ್ತಿದ್ದರೆ ತಂಡ ಇಷ್ಟು ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಈ ಬಾರಿಯ ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಧಿಕ ರನ್ ಸ್ಕೋರರ್ ಆಗಿ ವಿರಾಟ್ ಕೊಹ್ಲಿ ಅವರು ಕಾಣಿಸಿಕೊಂಡಿದ್ದಾರೆ.