ಪ್ರೀತಿಸಿದ ಹುಡುಗಿಯನ್ನು ಬೇರೆ ಹುಡುಗ ಮದುವೆಯಾಗಿದ್ದಕ್ಕಾಗಿ, ಹುಡುಕಿಕೊಂಡು ಹೋಗಿ ಈತ ಏನು ಮಾಡಿದ್ದಾನೆ ಗೊತ್ತೇ??

24

ನಮಸ್ಕಾರ ಸ್ನೇಹಿತರೆ ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬುದಾಗಿ ಸಿನಿಮಾ ಸಾಲುಗಳಿವೆ. ಆದರೆ ಪ್ರೀತಿ ಮಾಡಿದವರಿಗೆ ಮಾಡಬಾರದ ಕೆಲಸ ಮಾಡಿದರೆ ಖಂಡಿತವಾಗಿ ಆ ಜಗತ್ತು ಮೆಚ್ಚುವುದಿಲ್ಲ. ಇಲ್ಲಿ ಈಗ ನಡೆದಿರುವ ಘಟನೆ ಕೇಳಿದರೆ ಖಂಡಿತವಾಗಿ ನೀವು ಕೂಡ ಇದೇ ತರ್ಕಕ್ಕೆ ನಿಲುಕುತ್ತೀರಿ. ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಮದುವೆ ಸಮಾರಂಭಗಳಿಗೆ ಫ್ಲವರ್ ಡೆಕೋರೇಟ್ ಮಾಡುವ ಸತೀಶ್ ಎನ್ನುವತ ಯುವತಿ ಒಬ್ಬಳನ್ನು ಕೆಲವು ಸಮಯಗಳ ಹಿಂದೆ ಮದುವೆಯಾಗಿದ್ದ.

ಆದರೆ ಆ ಯುವತಿಯನ್ನು ರಾಕೇಶ್ ಎನ್ನುವಾತ ಇದಕ್ಕಿಂತಲೂ ಮೊದಲೇ ಪ್ರೀತಿಸುತ್ತಿದ್ದ. ಈ ವಿಚಾರವನ್ನು ತಿಳಿದಿದ್ದರೂ ಕೂಡ ಸತೀಶ್ ಆಕೆಯನ್ನು ಮದುವೆಯಾಗಿದ್ದ ಎಂಬುದಾಗಿ ತಿಳಿದು ಬಂದಿದೆ. ಇದೇ ವಿಚಾರಕ್ಕಾಗಿ ರಾಕೇಶ್ ಹಾಗೂ ಸತೀಶ್ ನಡುವೆ ಜಗಳ ಕೂಡ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ರಾಕೇಶನಿಗೆ ಸತೀಶ್ ಈಗ ಆಕೆ ನನ್ನ ಹೆಂಡತಿ ಎಲ್ಲವನ್ನು ಮರೆತುಬಿಡು ಎಂಬುದಾಗಿ ಕೂಡ ವಾರ್ನಿಂಗ್ ಕೂಡ ನೀಡಿ ಹೋಗಿದ್ದ. ಇದನ್ನೇ ಮನಸ್ಸಿಗೆ ತೆಗೆದುಕೊಂಡ ರಾಕೇಶ್ ಸತೀಶನಿಗೆ ಸ್ಕೆಚ್ ಕೂಡ ಹಾಕಿದ್ದ. ಇದೇ ಶುಕ್ರವಾರ ಬೈಯಪ್ಪನಹಳ್ಳಿಯ ಫ್ಲೈ ಓವರ್ ನಲ್ಲಿ ಹೋಗುತ್ತಿರಬೇಕಾದರೆ ರಾಕೇಶ್ ತನ್ನ ಸಹಚರರ ಜೊತೆಗೆ ರಾತ್ರಿ 9:30 ಸಮಯದ ಹೊತ್ತಿಗೆ ಸತೀಶನ ಮೇಲೆ ಹಲ್ಲೆ ಮಾಡುತ್ತಾನೆ. ನಂತರ ತನ್ನ ಸಹಚರರೊಂದಿಗೆ ಓಡಿ ಹೋಗುತ್ತಾನೆ.

ಈ ಸಂದರ್ಭದಲ್ಲಿ ಆರೋಪಿಗಳು ಸತೀಶನ ದೇಹದ ಅತ್ಯಂತ ಸೆನ್ಸಿಟಿವ್ ಅಂಗಗಳಾಗಿರುವ ಎದೆ ಹಾಗೂ ಕುತ್ತಿಗೆ ಸೇರಿದಂತೆ ಇತರ ಭಾಗಗಳಿಗೂ ಕೂಡ ಹಲ್ಲೆ ಮಾಡಿ ಆತನ ಪ್ರಾಣ ಹೋಗುವಂತೆ ಮಾಡಿದ್ದಾರೆ. ಈಗಾಗಲೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಸತೀಶನ ಪತ್ನಿಯ ವಿಚಾರಣೆಯನ್ನು ಕೂಡ ಆರಂಭಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ರಾಕೇಶ್ ಸೇರಿದಂತೆ ಆತನ ಸಹಚರರನ್ನು ಕೂಡ ಈಗಾಗಲೇ ಬಂಧಿಸಲಾಗಿದೆ. ನಿಜಕ್ಕೂ ಕೇವಲ ಪ್ರೀತಿಗಾಗಿ ಬೇರೆಯವರ ಜೀವನ ಹಾಗೂ ಜೀವನವನ್ನು ನಗಣ್ಯ ಎಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ.