ನೋಡಲು ಹೇಗಿದ್ದಾರೆ ಅನ್ನುವುದು ಬಿಡಿ: ಈ ಯುವ ನಟಿ ಮದುವೆಯಾದ ನಿರ್ಮಾಪಕ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಅದೆಷ್ಟು ಅಂತರ ಗೊತ್ತೇ??

45

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ರವರ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕಾಣಲು ಪ್ರಾರಂಭ ಆದಾಗಿನಿಂದಲೂ ಕೂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಎಲ್ಲರೂ ಕೂಡ ಆಶ್ಚರ್ಯ ಒಳಗಾಗಿದ್ದಾರೆ. ಮೊದಲಿಗೆ ಇವರಿಬ್ಬರ ಮದುವೆ ಫೋಟೋ ನೋಡಿದ ಪ್ರತಿಯೊಬ್ಬರೂ ಕೂಡ ಇದೊಂದು ಧಾರವಾಹಿ ಅಥವಾ ಸಿನಿಮಾ ಚಿತ್ರೀಕರಣದ ಮದುವೆ ಫೋಟೋಗಳು ಎಂಬುದಾಗಿ ಭಾವಿಸಿದ್ದರು.

ಆದರೆ ನಂತರ ಇವರಿಬ್ಬರ ಲವ್ ಸ್ಟೋರಿ ಯಶಸ್ವಿಯಾಗಿರುವುದನ್ನು ತಿಳಿದು ಪ್ರತಿಯೊಬ್ಬರು ಕೂಡ ಬೆಸ್ತು ಬಿದ್ದಿದ್ದಾರೆ. ತಿರುಪತಿಯಲ್ಲಿ ಮದುವೆಯಾಗಿರುವ ಇವರಿಬ್ಬರೂ ಆರತಕ್ಷತೆಯನ್ನು ಅದ್ದೂರಿಯಾಗಿ ಚೆನ್ನೈನಲ್ಲಿ ಮಾಡಿಕೊಂಡಿದ್ದಾರೆ. ಮದುವೆ ನಂತರ ಇವರಿಬ್ಬರ ನಡುವೆ ಸಾಕಷ್ಟು ವಿಚಾರಗಳು ಈಗ ಗಾಳಿ ಸುದ್ದಿಯಂತೆ ಹರಡಲು ಆರಂಭವಾಗಿದೆ. ಮಹಾಲಕ್ಷ್ಮಿಯವರು ಹಾಗೂ ರವೀಂದ್ರನ್ ಚಂದ್ರಶೇಖರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದೆ. ರವೀಂದ್ರನ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ ಕೂಡ ಮಹಾಲಕ್ಷ್ಮಿ ಈಗಾಗಲೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 8 ವರ್ಷದ ಮಗ ಕೂಡ ಇದ್ದಾನೆ.

ಸದ್ಯಕ್ಕೆ ಇವರಿಬ್ಬರ ವಯಸ್ಸಿನ ಅಂತರದ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಿದ್ದರೆ ಇವರಿಬ್ಬರ ವಯಸ್ಸಿನ ಅಂತರವನ್ನು ತಿಳಿದುಕೊಳ್ಳೋಣ ಬನ್ನಿ. ಮಹಾಲಕ್ಷ್ಮಿ ಅವರ ವಯಸ್ಸು 32 ವರ್ಷ ವಯಸ್ಸಾಗಿದೆ. ಇನ್ನು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರ ವಯಸ್ಸು 52 ವರ್ಷ ವಯಸ್ಸಾಗಿದೆ. ಅಂದರೆ ರವೀಂದ್ರನ್ ಚಂದ್ರಶೇಖರ್ ಅವರಿಗಿಂತ ಮಹಾಲಕ್ಷ್ಮಿ ಅವರು 20 ವರ್ಷ ಚಿಕ್ಕವರಾಗಿದ್ದಾರೆ. ವಯಸ್ಸಿನ ಅಂತರ ಏನೇ ಇರಲಿ ಪ್ರೀತಿಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇವರು ಈ ಮೂಲಕ ತಿಳಿಸಿದ್ದಾರೆ. ಆದರೆ ನಟಿಗರು ಮಾತ್ರ ಈ ಜೋಡಿಯ ಮದುವೆಯನ್ನು ಟೀಕಿಸುವುದನ್ನು ಬಿಟ್ಟಿಲ್ಲ.