ಬಿಗ್ ಬಾಸ್ ಮನೆಯಲ್ಲಿ ಬೆಂಕಿಯ ಚೆಂಡು ಆದ ಸೋನು ಗೌಡ: ಖಡಕ್ ಆಗಿ ಮನೆಯವರಿಗೆಲ್ಲರಿಗೂ ಕೊಟ್ಟ ವಾರ್ನಿಂಗ್ ಏನು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಈಗಾಗಲೇ ಪ್ರಮುಖ ಘಟ್ಟವನ್ನು ತಲುಪಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಈ ವಿಶೇಷ ಬಿಗ್ ಬಾಸ್ ಆವೃತ್ತಿಯಲ್ಲಿ ಕೆಲವೊಂದು ಸ್ಪರ್ಧಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದ್ದು ಸುದ್ದಿ ಕೂಡ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ವಿಚಾರಗಳಲ್ಲಿ ಚರ್ಚೆ ಆಗುತ್ತಿದ್ದಾರೆ.

ಈಗಾಗಲೇ ಹಲವಾರು ಬಾರಿ ನಾಮಿನೇಟ್ ಆಗಿದ್ದರೂ ಕೂಡ ಮನೆಯಿಂದ ಹೊರ ಬಂದಿಲ್ಲ ಪ್ರೇಕ್ಷಕರು ಅವರನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ಸೋನು ಶ್ರೀನಿವಾಸ ಗೌಡ ಅವರಿಗೆ ಕಳಪೆ ಪಟ್ಟವನ್ನು ಮನೆಯವರು ಕಟ್ಟುವ ಮೂಲಕ ಸೋನು ಅವರ ಕೋಪಕ್ಕೆ ಕಾರಣ ಆಗಿದ್ದಾರೆ. ಮನೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ನಟಿ ಜಯಶ್ರೀ ಅವರಿಗೆ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂಬುದಾಗಿ ಮನೆಯವರು ವೋಟ್ ಮಾಡಿದ್ದಾರೆ. ಸೋನು ಶ್ರೀನಿವಾಸ ಗೌಡ ಅವರಿಗೆ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬುದಾಗಿ ಹೇಳಿದ್ದು ಈ ವೋಟ್ ಮಾಡಿದವರಲ್ಲಿ ರಾಕೇಶ್ ಅಡಿಗ ಕೂಡ ಇದ್ದಾರೆ.

ವೋಟ್ ಮಾಡುವಾಗ ರಾಕೇಶ್ ಅಡಿಗ ಸೋನು ಅವರು ನಾವೇನು ಇಲ್ಲಿ ಮನೆ ಕೆಲಸ ಮಾಡೋಕೆ ಬಂದಿದ್ದೀವಾ ಎಂಬುದಾಗಿ ಹೇಳಿದ್ದಾರೆ ಹೀಗಾಗಿ ಅವರಿಗೆ ವೋಟ್ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದಾದ ನಂತರ ಸೋನು ಗೌಡ ಕೂಡ ಬೇಸರದಿಂದ ನಾವೇನು ಇಲ್ಲಿ ಕೆಲಸ ಮಾಡೋಕೆ ಬಂದಿದ್ದೀವಾ ಬಿಗ್ ಬಾಸ್ ನಮಗೆ ಏನು ಕೆಲಸ ಮಾಡೋಕೆ ಹೇಳಿದ್ದಾರೆ ಎಂಬುದಾಗಿ ಹೇಳಿ ನನಗೆ ಕಳಪೆ ಎಂದು ವೋಟ್ ಮಾಡಿದವರೆಲ್ಲರೂ ಕೂಡ ಫೇಕ್ ಎಂಬುದಾಗಿ ಹೇಳಿದ್ದಾರೆ. ಸೋನು ಗೌಡ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.