ತಮ್ಮ ತಂದೆ ತೀರಿಕೊಂಡಾಗ ಸಹಾಯ ಮಾಡಿದ್ದು ಆ ನಟ ಮಾತ್ರ ಎಂದ ದರ್ಶನ್: ಅಂದು ದರ್ಶನ್ ಸಹಾಯಕ್ಕೆ ನಿಂತವರು ಯಾರು ಗೊತ್ತೇ??

40

ನಮಸ್ಕಾರ ಸ್ನೇಹಿತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠವಂತರಲ್ಲಿ ಒಬ್ಬರಾಗಿದ್ದಾರೆ. ಅವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಹೆಸರನ್ನು ಹೊಂದಿದ್ದರೂ ಕೂಡ ಡಿ ಬಾಸ್ ತಂದೆಯ ಹೆಸರನ್ನು ಉಪಯೋಗಿಸಿಕೊಳ್ಳದೆ ಚಿತ್ರರಂಗದಲ್ಲಿ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಬೆಳೆದು ಬಂದವರು. ಆದರೆ ಆರಂಭದಿಂದ ಇಂದಿಗೂ ಕೂಡ ತಮ್ಮ ತಂದೆಯ ಹೆಸರನ್ನು ಪ್ರತಿಯೊಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿಟ್ಟುಕೊಳ್ಳುವಂತೆ ಬಾಳಿದವರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಮರಣ ಹೊಂದಿದ ಸಂದರ್ಭದಲ್ಲಿ ದರ್ಶನ್ ರವರ ಕುಟುಂಬ ಸಾಕಷ್ಟು ಕಷ್ಟವನ್ನು ಪಡುವಂತಾಯಿತು ಎಂಬುದು ನಿಮಗೆಲ್ಲ ಈಗಾಗಲೇ ತಿಳಿದಿರುವ ವಿಚಾರ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಿದವರು ಯಾರು ಎಂಬುದನ್ನು ದರ್ಶನ ರವರು ವಿನೋದ್ ಪ್ರಭಾಕರ್ ಅವರ ಹೊಸ ಪ್ರೊಡಕ್ಷನ್ ಸಂಸ್ಥೆಯ ಲಾಂಚಿಂಗ್ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ತೂಗುದೀಪ್ ಶ್ರೀನಿವಾಸ್ ರವರು ಮರಣ ಹೊಂದಿದ್ದ ಸಂದರ್ಭದಲ್ಲಿ ಎಲ್ಲರೂ ಕೂಡ ಕೂಡಲೇ ಬಂದು ನೋಡಿ ಹೋಗುತ್ತಾರೆ. ಯಾರು ಕೂಡ ಹೆಚ್ಚಿನ ಸಮಯ ಅಲ್ಲಿ ನಿಲ್ಲುವುದಿಲ್ಲ. ಆದರೆ ಟೈಗರ್ ಪ್ರಭಾಕರ್ ಅವರು ಮಾತ್ರ ಎಲ್ಲಾ ಕಾರ್ಯಗಳು ಮುಗಿಯುವವರೆಗೂ ಕೂಡ ಅಲ್ಲಿಯೇ ನಿಂತು ಎಲ್ಲಾ ಕಾರ್ಯಗಳಲ್ಲಿ ಸಹಾಯ ಮಾಡಿದ್ದಾರಂತೆ. ಡಿ ಬಾಸ್ ರವರ ತಂದೆಯನ್ನು ಬಾಸ್ ಎಂಬುದಾಗಿ ಟೈಗರ್ ಪ್ರಭಾಕರ್ ರವರು ಕರೆಯುತ್ತಿದ್ದನು ಕೂಡ ಈ ಸಂದರ್ಭದಲ್ಲಿ ಡಿ ಬಾಸ್ ನೆನಪಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ವಿನೋದ್ ಪ್ರಭಾಕರ್ ಅವರ ಜೊತೆಗೆ ಇಂದಿಗೂ ಕೂಡ ಅತ್ಯಂತ ಆತ್ಮೀಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಾಣಿಸಿಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ.