ಕೊನೆ ಕ್ಷಣದಲ್ಲಿ ಭಾರತ ತಂಡಕ್ಕೆ ಮತ್ತೊಂದು ಆಘಾತ: ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್: ದಿನಕ್ಕೊಂದು ಶಾಕ್ ಭಾರತಕ್ಕೆ

23

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡದ ಎದುರು ಸತತವಾಗಿ ವಿಜಯವನ್ನು ಸಾಧಿಸುವ ಮೂಲಕ ಏಷ್ಯಾ ಕಪ್ ಟೂರ್ನಮೆಂಟ್ ನ ಸೂಪರ್ 4 ಹಂತಕ್ಕೆ ಗ್ರೂಪಿನ ಅಗ್ರತಂಡವಾಗಿ ಎಂಟ್ರಿ ನೀಡಲು ಯಶಸ್ವಿಯಾಗಿದೆ. ಆದರೆ ಪ್ರಮುಖ ಘಟ್ಟಕ್ಕೆ ಏರಿರುವ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತಕಾರಿ ವಿಷಯ ಸಿಕ್ಕಿದೆ. ಅದೇನೆಂದರೆ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಗೆಲುವಿನಲ್ಲಿ ಕಾರ್ಣಿಕರ್ತರಾಗಿ ಕಾಣಿಸಿಕೊಂಡಿದ್ದ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ತಂಡದಿಂದ ಹೊರ ಬಿದ್ದಿದ್ದಾರೆ.

ಪಾಕಿಸ್ತಾನ ವಿರುದ್ಧದ ಹಾಗೂ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಅವರು ಯಾವ ರೀತಿಯಲ್ಲಿ ಉಪಯುಕ್ತ ಪ್ರದರ್ಶನವನ್ನು ನೀಡಿದ್ದಾರೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಮೊಣಕಾಲು ಇಂಚುರಿಯಿಂದಾಗಿ ರವೀಂದ್ರ ಜಡೇಜ ಅವರು ತಂಡದಿಂದ ಹೊರ ಹೋಗಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ಮೂಲಕ ಕೆಲವೊಂದು ಮೂಲಗಳು ಹೇಳುವ ಪ್ರಕಾರ ರವೀಂದ್ರ ಜಡೇಜಾ ಅವರು ಈ ಇಂಜುರಿ ಉಲ್ಬಣಿಸಿದರೆ ಟಿ20 ವಿಶ್ವಕಪ್ ಅನ್ನು ಕೂಡ ಮಿಸ್ ಮಾಡಿಕೊಳ್ಳಬೇಕಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.

ಇನ್ನು ಏಷ್ಯಾಕಪ್ ನಲ್ಲಿ ಅವರ ಸ್ಥಾನವನ್ನು ಎಡಗೈಸ್ಪಿನ್ ಬೌಲರ್ ಹಾಗೂ ಆಲ್ರೌಂಡರ್ ಆಗಿರುವ ಅಕ್ಷರ ಪಟೇಲ್ ರವರು ರಿಪ್ಲೇಸ್ ಮಾಡಲಿದ್ದಾರೆ ಎಂಬುದಾಗಿ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ ರವೀಂದ್ರ ಜಡೇಜಾ ಅವರ ಸೇವೆಯನ್ನು ತಂಡ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರದ ವಿಚಾರವಾಗಿದೆ.