ಒಂದಲ್ಲ ಎರಡಲ್ಲ ಮೂರು ಗ್ರಹಗಳಿಂದ ಈ ವರ್ಷ ಪೂರ್ತಿ ನಿಮಗೆ ಅದೃಷ್ಟ: ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

73

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ, ಬುಧ ಹಾಗೂ ಗುರು ಈ ಮೂರು ಗ್ರಹಗಳು ಕೂಡ ರಾಶಿ ಬದಲಾವಣೆಯನ್ನು ಮಾಡಲಿವೆ. ಮತ್ತು ಇವುಗಳ ಪ್ರಭಾವ ಎನ್ನುವುದು ಮುಂದಿನ ವರ್ಷದ ಜನವರಿ 6ನೇ ತಾರೀಖಿನವರೆಗೂ ಇರಲಿದೆ. ಈ ಕಾರಣದಿಂದಾಗಿ ನಾಲ್ಕು ರಾಶಿ ಅವರ ಜೀವನದಲ್ಲಿ ರಾಜಯೋಗ ಮೂಡಿ ಬರಲಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ; ಮೂರು ಗ್ರಹಗಳ ರಾಶಿ ಬದಲಾವಣೆ ಮಿಥುನ ರಾಶಿಯವರಿಗೆ ಉದ್ಯೋಗ ಹಾಗೂ ಆರ್ಥಿಕ ಸಂಬಂಧಿತ ವಿಚಾರದಲ್ಲಿ ಲಾಭವನ್ನು ತರಲಿದೆ. ವೈವಾಹಿಕ ಜೀವನ ಸಿಹಿಯಿಂದ ಕೂಡಿರಲಿದ್ದು ಸಂಗಾತಿಯೊಂದಿಗೆ ಇರುವ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲಿದ್ದೀರಿ.

ತುಲಾ ರಾಶಿ; ಮೂರು ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಅದೃಷ್ಟ ಕೂಡಿ ಬರಲಿದೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕುಟುಂಬಸ್ಥರ ಬೆಂಬಲದಿಂದಾಗಿ ಹಲವಾರು ಪ್ರಮುಖ ಕಾರ್ಯಗಳು ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರಲಿದೆ.

ವೃಶ್ಚಿಕ ರಾಶಿ; ಜನವರಿ ಆರರವರೆಗೆ ಬಹುತೇಕ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಸಂಪೂರ್ಣಗೊಳ್ಳಲಿವೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಗೆಲುವು ನಿಮಗೆ ಶತಸಿದ್ಧ. ಬಹುಕಾಲಗಳ ನಂತರ ಕುಟುಂಬದೊಂದಿಗೆ ಸಂತೋಷವಾಗಿ ಕಾಲವನ್ನು ಕಳೆಯಲಿದ್ದೀರಿ. ನಿಮ್ಮ ಉನ್ನತ ಕಾರ್ಯಗಳಿಂದಾಗಿ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ.

ಮೀನ ರಾಶಿ; ವ್ಯಾಪಾರದಲ್ಲಿ ಲಾಭದ ಹೆಚ್ಚಳವಾಗಲಿದ್ದು ಸಾಕಷ್ಟು ದಿನಗಳಿಂದ ನಿಮ್ಮ ಕೈ ಸೇರಬೇಕಾಗಿದ್ದ ಹಣ, ಯಶಸ್ವಿಯಾಗಿ ನಿಮ್ಮ ಕೈ ಸೇರಲಿದೆ. ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿಶೇಷ ಲಾಭ ದೊರೆಯಲಿದೆ. ಮುಂದಿನ ವರ್ಷದವರೆಗೂ ಮೂರು ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಲಾಭವನ್ನು ಪಡೆಯುವ ರಾಶಿಗಳು ಇವೇ.